Headlines

ಸಿಎಂ ತವರೂರು ಶಿಕಾರಿಪುರದಲ್ಲಿ ರೈತ ಕಳೆನಾಶಕ ಸೇವಿಸಿ ಆತ್ಮಹತ್ಯೆ:

ಶಿಕಾರಿಪುರ: ಸಾಲಬಾಧೆಯಿಂದ ಮಾನಸಿಕವಾಗಿ ಕುಂದಿದ್ದ ರೈತ ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ಸುರಗಿಹಳ್ಳಿ ಯಲ್ಲಿ ಘಟನೆ ನಡೆದಿದೆ.

 ಚಂದ್ರಪ್ಪ ಆತ್ಮಹತ್ಯೆ ಮಾಡಿಕೊಂಡ ರೈತ. ಜೂನ್ 5 ರಂದು ಮನೆಯಲ್ಲಿ ಕಳೆನಾಶಕವನ್ನು ಸೇವಿಸಿದ್ದರು. ಶಿಕಾರಿಪುರ ಆಸ್ಪತ್ರೆಗೆ ಸೇರಿಸಿದರೂ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಪ್ಪ ಮೃತ ಪಟ್ಟಿದ್ದಾರೆ.

 ಜಮೀನಿನಲ್ಲಿ ಶುಂಠಿ ಮೆಕ್ಕೆಜೋಳ ಬೆಳಗಿದ್ದರು. ಇದಕ್ಕಾಗಿ ಸಹಕಾರಿ ಸಂಘ, ಬ್ಯಾಂಕ್, ಹಾಗೂ ಕೈಗಡ ಸಾಲ ಪಡೆದಿದ್ದರು. ಆದರೆ ಬೆಳೆ ಗೆ ನಿರೀಕ್ಷಿತ  ಬೆಲೆ ಸಿಗದೆ , ಸಾಲವನ್ನು ತೀರಿಸಲಾಗದೆ ಮಾನಸಿಕವಾಗಿ ಕುಂದಿದ್ದರು. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:ರಾಮನಾಥ್

About The Author

Leave a Reply

Your email address will not be published. Required fields are marked *