ಮೇಗರವಳ್ಳಿ: ಇಂದು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ 2 ನೆಯ ಡೋಸ್ ಲಸಿಕಾ ಅಭಿಯಾನ ನಡೆಯಿತು..
ಬೆಳಿಗ್ಗೆ 6 ಗಂಟೆಯಿಂದ 9 ಗಂಟೆಯ ವರೆಗೆ ನೂರಕ್ಕೂ ಹೆಚ್ಚು ಜನ ಬಂದು ಜಮಾಯಿಸಿದ್ದರು. ಆಸ್ಪತ್ರೆಯ ಮುಂಬಾಗದಲ್ಲಿರುವ ಚಿಕ್ಕ ಸ್ಥಳದಲ್ಲಿ ಸೇರಿದ್ದ ನೂರಾರು ಜನರಿಗೆ ಸಾಮಾಜಿಕ ಅಂತರದ ಪರಿವೇ ಇರಲಿಲ್ಲ. ಕೇವಲ 50 ಲಸಿಕೆಗಳು ಸರಬರಾಜಾಗಿತ್ತು ಆದ್ದರಿಂದ ಸಾಮಾನ್ಯವಾಗಿ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು. 9 ಗಂಟೆಗೆ ಹಾಜರಾದ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆಯ ಬಾಗಿಲು ತೆರೆಯಲು ಹರಸಾಹಸ ಪಡಬೇಕಾಯಿತು.
ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದೆ ನಿಜ ಆದರೆ ಇದರ ಅರ್ಥ ದೇಶ ಕೊರೋನಾಮುಕ್ತವಾಗಿದೆ ಎಂದಲ್ಲ.
ಮಲೆನಾಡಿನ ಜನ ಪ್ರಜ್ಞಾವಂತರು ಎಂಬ ಮಾತಿದೆ.. ಅದಕ್ಕೆ ಅಪವಾದದಂತೆ ಜನ ತಮ್ಮ ಜವಾಬ್ದಾರಿಯನ್ನು ಮರೆತು ನೂಕು ನುಗ್ಗಲನ್ನು ಸೃಷ್ಟಿಸುವುದು ಸರಿಯಲ್ಲ, ಮೇಲಾಗಿ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
ವರದಿ: ಪ್ರಶಾಂತ್ ಮೇಗರವಳ್ಳಿ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..