Headlines

ಬಗರ್ ಹುಕುಂ ಸಾಗುವಳಿ ಅರ್ಜಿದಾರರಿಗೆ ತಕ್ಷಣದಲ್ಲೇ ಸಾಗುವಳಿ ಚೀಟಿಯನ್ನು ನೀಡಿ : ಕಾಗೋಡು ತಿಮ್ಮಪ್ಪ

ಸಾಗರ :ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಪ್ರಕರಣಗಳ ಸಾಗುವಳಿ ಚೀಟಿಯನ್ನು ತಕ್ಷಣದಲ್ಲಿ ನೀಡುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರ ವತಿಯಿಂದ ಸಾಗರ ತಹಶೀಲ್ದಾರ್ ರಿಗೆ ಮನವಿಯನ್ನು ಸಲ್ಲಿಸಿದರು.

 ಪ್ರತಿಭಟನೆಯ ನೇತೃತ್ವವನ್ನು ವಹಿಸಿದ ಮಾಜಿ ಸಚಿವರು ಮಾಜಿ ವಿಧಾನಸಭಾ ಅಧ್ಯಕ್ಷರು ಆದ ಶ್ರೀ ಕಾಗೋಡು ತಿಮ್ಮಪ್ಪನವರು ಮಾತನಾಡುತ್ತಾ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ  ರೈತರ ಬಗರ್ ಹುಕುಂ ಜಮೀನು ಗಳಿಗೆ ಅರ್ಜಿ ಸಲ್ಲಿಸಿ ಸಾಕಷ್ಟು ಸಮಯ ಆದರೂ ಕೂಡ ಇದುವರೆಗೂ ಸಾಗುವಳಿ ಚೀಟಿಯನ್ನು ನೀಡಿಲ್ಲ ರೈತರು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಆದಷ್ಟು ಬೇಗ ಸಾಗುವಳಿ ಚೀಟಿಯನ್ನು ನೀಡಬೇಕು 94ಸಿ,94ಸಿಸಿ ಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸಿದ ಅರ್ಜಿದಾರರ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ ಆರ್ ಜಯಂತ್ ಸುರೇಶ್ ಬಾಬು ಮಲ್ಲಿಕಾರ್ಜುನ ಹಕ್ರೆ  ನಗರಸಭೆ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ ರವಿ ಲಿಂಗನಮಕ್ಕಿ  ಇನ್ನೂ ಅನೇಕ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು          

ವರದಿ :ಧರ್ಮರಾಜ್ ಜಿ ಸಾಗರ

Leave a Reply

Your email address will not be published. Required fields are marked *