Headlines

ನಂದಿತಾ ಸಾವಿನ ಪ್ರಕರಣ ಸಿಬಿಐ ಗೆ ವಹಿಸಿ :ಕಾಂಗ್ರೆಸ್ ಮುಖಂಡ ಅಮ್ರಪಾಲಿ ಸುರೇಶ್

ತೀರ್ಥಹಳ್ಳಿ: ನೂತನವಾಗಿ ಗೃಹ ಸಚಿವರಾಗಿ ಆಯ್ಕೆಯಾಗಿರುವ ಆರಗ ಜ್ಞಾನೇಂದ್ರರವರು ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣವನ್ನು ಸಿಬಿಐ ಗೆ ವಹಿಸಿ ನ್ಯಾಯ ಕೊಡಿಸುವ ಮೂಲಕ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ತೀರ್ಥಹಳ್ಳಿ ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್ ರವರು ಆಗ್ರಹಿಸಿದ್ದಾರೆ.

ಕರ್ನಾಟಕ ಸರ್ಕಾರದ ಅತಿಮುಖ್ಯ ಮತ್ತು ಎರಡನೇ ಮಹತ್ವದ ಖಾತೆಯನ್ನು ಅಲಂಕರಿಸಿದ್ದೀರಿ, ಅಭಿನಂದನೆಗಳು.
ತೀರ್ಥಹಳ್ಳಿಯ ನಾಗರೀಕರಿಗೆ ನಿಮ್ಮ‌ಮೇಲೆ ಅತೀವ ನಿರೀಕ್ಷೆಯಿದೆ . ತಾವು ಪಕ್ಷದಲ್ಲೂ ಅತಿ ಪ್ರಭಾವಿಗಳು,ನೇರವಾಗಿ ದೆಹಲಿಯ ಸಂಪರ್ಕ ಹೊಂದಿರುವ ನಾಯಕರು. ಕಳೆದ ಚುನಾವಣೆಯಲ್ಲಿ ಅಂದಿನ‌ ನಿಮ್ಮ‌ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಇಂದಿನ ಗೃಹ ಸಚಿವರಾದ  ಅಮಿತ್ ಷಾರವರನ್ನು‌ ತೀರ್ಥಹಳ್ಳಿಗೆ ಕರೆ ತಂದು ನಂದಿತಾಳ ಮನೆಯಲ್ಲಿ ನ್ಯಾಯ ಕೊಡಿಸುವ ಸಂಕಲ್ಪ ಕೂಡಾ ಮಾಡಿರುತ್ತೀರಿ.

ಈಗ ಇನ್ನಾದರು ಈ ನಿಟ್ಟಿನಲ್ಲಿ‌ ಕಾರ್ಯ ಪೃವೃತ್ತರಾಗಬಹುದೆಂದು ಜನ‌ ನಿರಿಕ್ಷಿಸುತ್ತಿದ್ದಾರೆ.ಆದಷ್ಟು ಬೇಗ ಈ ಪ್ರಕರಣವನ್ನು ಸಿಬಿಐ ಗೆ ವಹಿಸಿ ನಿಜಾಂಶ ಜನರ ಮುಂದಿಡಬೇಕಾಗಿದೆ ಎಂದರು.

     [ ಅಮ್ರಪಾಲಿ ಸುರೇಶ್  –  ಕಾಂಗ್ರೆಸ್‌ ಮುಖಂಡರು      ]



ಅಂದು ನಡೆದ ದೊಂಬಿ ದಾಂಧಲೆಗಳಿಂದ ಹಲವಾರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳು ಹಾನಿಯಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು, ನೂರಾರು ಯುವಕರು ಕೊರ್ಟ್ ಕಟಕಟೆ ಎಂದು ಅಲೆದದ್ದನ್ನು ತಾವು ಮರೆಯಬಾರದು.

ಇನ್ನೂ ನಿಮ್ಮ‌ ಬಳಿ‌ ಹತ್ತೊಂಬತ್ತು ತಿಂಗಳ ಕಾಲಾವಧಿ‌ಇದೆ , ತಾವುಗಳು ಆ ಸಮಯವನ್ನು ಸರಿಯಾಗಿ ಬಳಸಿ ಸಾವಿಗೆ ಕಾರಣರಾದವರನ್ನು ಶಿಕ್ಷೆಗ ಒಳಪಡಿಸಬೇಕು. ಇಲ್ಲವಾದಲ್ಲಿ ಮತ್ತೆ ಬರುವ ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸುವ ಭಾಗವಾಗಿ ಈ ಪ್ರಕರಣ ಬಳಕೆ‌ ಮಾಡುವ ಹುನ್ನಾರವಿದೆ ಎಂದು ತೀರ್ಥಹಳ್ಳಿಯ ಜನ ಭಾವಿಸುತ್ತಾರೆ. 

ಶಾಂತಿ‌ ಪ್ರಿಯರು, ಸಹಬಾಳ್ವೆಯ ಬೀಡಾಗಿದ್ದ‌ ತೀರ್ಥಹಳ್ಳಿ‌ ಕ್ಷೇತ್ರದ ಕೋಮು ಸಾಮರಸ್ಯ, ಶಾಂತಿ ಕದಡಿದ ಈ ಕೋಮು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡದಿದ್ದಲ್ಲಿ ತಾವು ಹಾಗೂ ತಮ್ಮ‌ ಪಕ್ಷದವರೇ ಈ ಪ್ರಕರಣಕ್ಕೆ ನೇರ ಹೊಣೆಗಾರರು ಎಂದು ಜನತೆ ಭಾವಿಸಬೇಕಾಗುತ್ತದೆ.ಎಂದು ಕಾಂಗ್ರೆಸ್ ಮುಖಂಡರಾದ ಅಮ್ರಪಾಲಿ ಸುರೇಶ್ ತಿಳಿಸಿದ್ದಾರೆ.


ವರದಿ : ಪ್ರಶಾಂತ್ ಮೇಗರವಳ್ಳಿ

Leave a Reply

Your email address will not be published. Required fields are marked *