Headlines

ಶಿಕಾರಿಪುರದ ತಾಲೂಕ್ ಕ್ರೀಡಾಂಗಣದ ನೂತನ ಜಿಮ್ ಉದ್ಘಾಟಿಸಿದ ಸಂಸದ ಬಿ ವೈ ರಾಘವೇಂದ್ರ.

ಶಿಕಾರಿಪುರದ ವಿವಿಧ ಸಮಾರಂಭದಲ್ಲಿ ಭಾಗವಹಿಸಿದ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ,ಇಂದು ಶಿಕಾರಿಪುರದ ತಾಲೂಕು ಕ್ರೀಡಾಂಗಣದಲ್ಲಿ ನೂತನವಾಗಿ ಆರಂಭವಾಗುತ್ತಿರುವ ಮಲ್ಟಿ ಜಿಮ್ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತಾನಾಡಿದ ಸಂಸದ ಬಿ ವೈ ರಾಘವೇಂದ್ರ ಈ ಸುಸಜ್ಜಿತ ವ್ಯಾಯಾಮ ಶಾಲೆಯ ಉಪಯೋಗವನ್ನು ನಗರದ ಯುವಕರು ಪಡೆದುಕೊಳ್ಳಬೇಕು. ಯುವ ಶಕ್ತಿಯೇ ರಾಷ್ಟ್ರದ ಶಕ್ತಿ, ಯುವಜನತೆ ಸದೃಢರಾದರೆ ದೇಶವು ಎಂದಿಗೂ ಸದೃಢ.ದೇಶದ ಜನ ದೇಹವನ್ನು ಬಲಿಷ್ಠವಾಗಿ ಹಾಗು ಆರೋಗ್ಯಕರವಾಗಿ ಇದ್ದರೆ ಯಾವ ಅರೋಗ್ಯದ ಸಮಸ್ಯೆ ಇಲ್ಲದೆ ಬದುಕಬಹುದು ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯನ್ನು ದೇಶದ ಮಾದರಿ ಜಿಲ್ಲೆಯನ್ನಾಗಿ ಮಾಡಲು ಪಣತೊಡುವುದಾಗಿ ಹಾಗು ಅಂತರ್ ರಾಷ್ಟ್ರೀಯಮಟ್ಟದ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದಾಗಿ ತಿಳಿಸಿದರು. ಕೇಂದ್ರದಿಂದ ಶಿವಮೊಗ್ಗ ಜಿಲ್ಲೆಗೆ ತನ್ನ ಶಕ್ತಿಮೀರಿ ಅನುದಾನವನ್ನು ತರುತಿರುವುದಾಗಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನೆಯಲ್ಲಿ ಅಂತಾರಾಷ್ಟ್ರೀಯ ಜುಡೋ ಕ್ರೀಡಾಪಟು ಅವಿನಾಶ್ ವಾಚ್ಯನಾಯ್ಕ್. ರಾಮಾನಾಯ್ಕ್. ಹಾಲಪ್ಪ. ಮೋಹನ್, ಬೆಣ್ಣೆ ದೇವೇಂದ್ರಪ್ಪ. ಯುವ ಸಬಲೀಕರಣ ಮಂಜುನಾಥ್. ಪುರಸಭೆ ಅಧ್ಯಕ್ಷ ಲಕ್ಷ್ಮಿ ಮಾಲಿಂಗಪ್ಪ ಮತ್ತಿತರರು  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *