Ripponpete | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ ಬಿ ಬಳೆಗಾರ್ ಆಯ್ಕೆ
ರಿಪ್ಪನ್ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತಿಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 2024 ರ 57ನೇ ಗಣೇಶೋತ್ಸವದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
57 ನೇ ಗಣೇಶೋತ್ಸವದ ಅಧ್ಯಕ್ಷರಾಗಿ ರಿಪ್ಪನ್ಪೇಟೆಯ ರಾಮಚಂದ್ರ ಬಿ ಬಳೆಗಾರ್ ಆಯ್ಕೆಯಾಗಿದ್ದು ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ್ ಬಳ್ಳಾರಿ ರವರು ಆಯ್ಕೆಯಾಗಿದ್ದಾರೆ.
ಕಳೆದ ಸಾಲಿನ ಹಿಂದೂ ರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ ಪ್ರಮುಖರಾದ ಎಂ ಬಿ ಮಂಜುನಾಥ್ ,ರವೀಂದ್ರ ಕೆರೆಹಳ್ಳಿ, ಎಂ.ಸುರೇಶ್ಸಿಂಗ್,ಆರ್.ರಾಘವೇಂದ್ರ,ಹೆಚ್.ಎನ್.ಚೋಳರಾಜ್,ಯೋಗೀಶ್,,ಆರ್.ಈ.ಭಾಸ್ಕರ್ಶೆಟ್ಟಿ,ವೈ.ಜೆ.ಕೃಷ್ಣ,ವಾಸುಶೆಟ್ಟಿಗವಟೂರು,ಇನ್ನಿತರರು ಹಾಜರಿದ್ದರು.