Headlines

ರಿಪ್ಪನ್ ಪೇಟೆ : ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲ್ ರ 91 ನೇ ಜನ್ಮ ದಿನಾಚರಣೆ ಪಕ್ಷಾತೀತವಾಗಿ ಆಚರಣೆ

ರಿಪ್ಪನ್ ಪೇಟೆ : ಸಮಾಜವಾದಿ ಚಿಂತನೆಯಲ್ಲಿ ಸಮಾಜದ ಸರ್ವ ಜನಾಂಗಕ್ಕೂ ಸಹಬಾಳ್ವೆ, ಸಾಮರಸ್ಯವನ್ನು ಸಾರಿ ಕರ್ನಾಟಕವನ್ನು ಉತ್ತುಂಗಕ್ಕೆ ಏರಿಸಿದ ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ರವರ ಕೊಡುಗೆ ಕರ್ನಾಟಕ ರಾಜ್ಯಕ್ಕೆ ಅನನ್ಯ ಹಾಗು ಅಪಾರ ಎಂದು ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಅರ್ ಎ ಚಾಬುಸಾಬ್ ಹೇಳಿದರು.         

ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ರವರ 91 ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

 ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ಆರ್ ಎನ್ ಮಂಜುನಾಥ್ ಮಾತನಾಡಿ ಸಮಾಜ ಕಂಡ ಸಮಾಜವಾದಿ ಚಿಂತಕರಲ್ಲಿ ರಾಜ್ಯಕ್ಕೆ ಜೆ ಹೆಚ್ ಪಟೇಲ್ ರವರ ಕೊಡುಗೆ ಅಪೂರ್ವವಾದುದು ಎಂದರು.
ಈ ಸಭೆಗೆ ಸರ್ವ ಪಕ್ಷದ ಮುಖಂಡರುಗಳು ಆಗಮಿಸಿ ಪಕ್ಷಾತೀತವಾಗಿ ಜನ್ಮ ದಿನಾಚರಣೆಯನ್ನು ಆಚರಿಸಿದ್ದು ಅವರ ವ್ಯಕ್ತಿತ್ವ ಏನು ಎಂಬುವುದಕ್ಕೆ ಸಾಕ್ಷಿಯಾಯಿತು.

ಈ ಸಮಾರಂಭದಲ್ಲಿ ಮಾಜಿ ತಾಪಂ ಸದಸ್ಯರಾದ ಎಂ ಬಿ ಲಕ್ಷಣ ಗೌಡ,ರಿಪ್ಪನ್ ಪೇಟೆಯ ಗ್ರಾಪಂ ಸದಸ್ಯರುಗಳಾದ ಆಸೀಫ಼್ ಭಾಷಾಸಾಬ್,ಪ್ರಕಾಶ್ ಪಾಲೇಕರ್,ಮಲ್ಲಿಕಾರ್ಜುನ್ ಬಿಜೆಪಿ ಮುಖಂಡರಾದ ಆರ್ ರಾಘವೇಂದ್ರ ರೈತ ಸಂಘದ ಮುಖಂಡರಾದ ಆರ್ ಎನ್ ಮಂಜಪ್ಪ , ಸುಗಂಧರಾಜ್ ಮತ್ತು ಪ್ರಮುಖರಾದ ಜಿ ಎಸ್ ರಾಘವೇಂದ್ರ,ಆರ್ ಗೋಪಾಲಕೃಷ್ಣ, ಭೀಮರಾಜ್ ಕೆರೆಹಳ್ಳಿ ರವೀಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


ವರದಿ : ದೇವರಾಜ್ ಆರಗ

Leave a Reply

Your email address will not be published. Required fields are marked *