ಹೊಸನಗರ : ತಾಲ್ಲೂಕು ವೀರಶೈವ-ಲಿಂಗಾಯತ ಪರಿಷತ್ ನ ಸರ್ವ ಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ವೀರಶೈವ-ಲಿಂಗಾಯತ ಪರಿಷತ್ ನ ಅಧ್ಯಕ್ಷರಾಗಿ ಆನಂದ್ ಮೆಣಸೆ ರವರು ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ದೇವರಸಲಕಿ,ದೇವು ಹುಳಿಗದ್ದೆ,ಲೋಕೇಶ್ ಶುಂಠಿಕೊಪ್ಪ,ಖಜಾಂಚಿಯಾಗಿ ಚಂದ್ರಶೇಖರ್ ಹಾಲುಗುಡ್ಡೆ,ಉಪಾದ್ಯಕ್ಷರುಗಳಾಗಿ ಜಗದೀಶ್ ಕುಕ್ಕಳಲೆ,ದಯಾಕರ್,ವಿಶ್ವನಾಥ್ ಹೊನ್ನೆಬೈಲು,ಪ್ರವೀಣ್ ಎಂ.ಗುಡ್ಡೆಕೊಪ್ಪ,ಕಮಲಾಕರ್ ಕಮದೂರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಸಚಿನ್ ಗೌಡ ಗರ್ತಿಕೆರೆ,ನಿರಂಜನ್ ರಿಪ್ಪನ್ ಪೇಟೆ,ಟಿ.ಎಲ್ ಷಣ್ಮುಖ,ಶಿವಮೂರ್ತಿ ಹರತಾಳು,ಸುದಾಕರ್ ಬೆನವಳ್ಳಿ.ಹಾಗೂ 26 ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಹಾಗೂ ವೀರಶೈವ-ಲಿಂಗಾಯತ ಕಾವಲು ಪರಿಷತ್ತು,ಕಾನೂನು ಪರಿಷತ್ತು,ಪ್ರಚಾರ ಪರಿಷತ್ತು ಗಳನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವೀರಶೈವ- ಲಿಂಗಾಯತ ಕಾವಲು ಪರಿಷತ್ತಿನ ಅಧ್ಯಕ್ಷರಾಗಿ ರಾಜೇಂದ್ರ ಘಂಟೆ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರೇಶ್ ಆಲವಳ್ಳಿ,ವಾಟಗೋಡು ಸುರೇಶ್,ವರ್ತೇಶ್ ರಿಪ್ಪನ್ ಪೇಟೆ, ಮನೋದರ್ ಗೌಡ್ರು, ಯೋಗೇಂದ್ರಪ್ಪ ಗೌಡ್ರು,ವೀರೇಶ್ ಗೌಡ್ರು ಮಳಲಿಕೊಪ್ಪ,ಈಶ್ವರಪ್ಪ ಗೌಡ್ರು ಕುಕ್ಕಳಲೆ ಹಾಗೂ ಪರಿಷತ್ತಿನ ಸರ್ವ ಸದಸ್ಯರು ಉಪಸ್ಥಿತರಿದ್ದರು.