ಶಿವಮೊಗ್ಗ : ತಡರಾತ್ರಿ ಸಮಾರು 9.30 ಆಸುಪಾಸುನಲ್ಲಿ ಹೊಸದುರ್ಗ- ಶಿವಮೊಗ್ಗ ಮಾರ್ಗವಾಗಿ ಶಿವಮೊಗ್ಗದ ಕಡೆಗೆ ಟಾಟಾ ಲಗೇಜ್ ಆಟೋ ಒಂದು ಹೋರಿಯನ್ನು,ತುಂಬಿಕೊಂಡು ಬರುತ್ತಿದ್ದ ಗಾಡಿಯನ್ನು ಗಮನಿಸಿದ ಅಭಿಷೇಕ್ ಹುಂಚ ಹಾಗೂ ಮತ್ತವರ ಸ್ನೇಹಿತರು ಅನುಮಾನಗೊಂಡು ಗಾಡಿಯನ್ನು ತಡೆದು ನಿಲ್ಲಿಸಿ,ವಿಚಾರಿಸಿ ಕೇಳಿದಾಗ ಗಾಡಿಯಲ್ಲಿದವರು, ಮಾಚೇನಹಳ್ಳಿ ಆಯನೂರು ಹತ್ತಿರ ಹೋಗುದಾಗಿ ಹೇಳಿದರು ,ಅನುಮಾನ ಹೆಚ್ಚಿದ್ದರಿಂದ ಗಾಡಿ ಅಲ್ಲೇ ನಿಲ್ಲಿಸಿ 112ಗೆ ಮಾಹಿತಿ ನೀಡಿ ಹತ್ತಿರದ ದೊಡ್ಡಪೇಟೆ ಠಾಣೆಗೆ ಮಾಹಿತಿ ನೀಡಿ ಗಾಡಿ ತಲುಪಿಸಿ, ಸೂಕ್ತ ವಿಚಾರಣೆ ನೆಡೆಸಲು ಪೊಲೀಸ್ ಸಿಬ್ಬಂದಿಗಳ ಹತ್ತಿರ ಮಾತುಕತೆ ನೆಡಿಸಿ. ಹಾಗೂ ಇದೆ ಸಂದರ್ಭದಲ್ಲಿ,ಮಲೆನಾಡು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಎಗ್ಗಿಲ್ಲದೇ ನೆಡೆಯುತ್ತಿರುವ ಗೋವುಗಳ ಅಕ್ರಮ ಸಾಗಾಟ ದಂದೆ ಹೆಚ್ಚಾಗಿ ಕಂಡುಬರುತ್ತಾ ಇರುವುದರಿಂದ ರಾಜ್ಯ ಗೃಹ ಸಚಿವರ ಸಂಪರ್ಕ ಮಾಡಿ ಪ್ರಕರಣವನ್ನ ಗಮನಕ್ಕೆ ತಂದು ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನ ಆಗ್ರಹ ಮಾಡಿದ್ದೇವೆ ಎಂದು ಅಭಿಷೇಕ್ ಹುಂಚ ಹಾಗೂ ಭಜರಂಗದಳದ ಕಾರ್ಯಕರ್ತರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂದಿಸಿದಂತೆ ಭಜರಂಗದಳದ ಗಣೇಶ್ ಪ್ರಸಾದ್ ದೇವಾಡಿಗ,ಬಸವರಾಜ್, ಹಾಗೂ ರಾಜು ಗೌಡ್ರು ಅಭಿಷೇಕ್ ಹುಂಚ, ಮತ್ತಿರರು ಇದ್ದರು.
ವರದಿ : ಅಜಿತ್ ಗೌಡ ಬಡೆನಕೊಪ್ಪ
About The Author
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್