Headlines

ಶಿವಮೊಗ್ಗ : ಶೌಚಾಲಯದ ಗುಂಡಿಯಲ್ಲಿ ಹಸುಗೂಸಿನ ಶವ ಪತ್ತೆ :

ಶಿವಮೊಗ್ಗ : ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ‌ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಹೊಳೆಹೊನ್ನೂರಿನ ಸಿದ್ದರ ಕಾಲೋನಿಯಲ್ಲಿ ನಡೆದಿದೆ.

ಸಿದ್ದರ ಕಾಲೋನಿಯ ಮಹದೇವ ಎಂಬುವ ವ್ಯಕ್ತಿ ಮನೆಯ ಹಿಂಬದಿಯಲ್ಲಿ  ಶೌಚಾಲಯದ ಉದ್ದೇಶಕ್ಕಾಗಿ ಗುಂಡಿ ತೆಗೆಯಿಸಲಾಗಿತ್ತು.ಮಳೆ ಬಂದ ಹಿನ್ನಲೆಯಲ್ಲಿ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು.

ಇಂದು ಈ ಗುಂಡಿಯ ನೀರಿನಲ್ಲಿ ನವಜಾತ ಶಿಶುವಿನ‌ ಮೃತದೇಹವೊಂದು ತೇಲುತ್ತಿರುವುದು ಮಹದೇವ ಎನ್ನುವವರಿಗೆ ಕಾಣಿಸಿದೆ. ಮಗುವಿನ ಜನನವನ್ನ ಮುಚ್ಚಿಡಲು ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ. 

ಮಗು ಜೀವಂತವಾಗಿರುವಾಗಲೇ ಗುಂಡಿಗೆ ಎಸೆಯಲಾಗಿದೆಯೋ ಅಥವ ಸಾಯಿಸಿ ಎಸೆಯಲಾಗಿದೆಯೋ ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

ಕೇವಲ 2 ದಿನದ ಗಂಡು ಮಗು ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. 

 ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ಈ ಪ್ರಕರಣ ನಡೆದು ಮೂರು ದಿನ ಕಳೆದಿದೆ ಆದರೆ ಯಾರು ಈ ಕೃತ್ಯವೆಸಗಿದವರು ಎಂದು ಇನ್ನೂ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *