Arasalu | ರೈಲ್ವೆ ಹಳಿಗೆ ಅಡ್ಡಲಾಗಿ ಬಿದ್ದ ಮರ | ಶಿವಮೊಗ್ಗ – ಸಾಗರ ಇಂಟರ್ ಸಿಟಿ ರೈಲು ಜಾಮ್ – ಪ್ರಯಾಣಿಕರ ಪರದಾಟ
ರಿಪ್ಪನ್‌ಪೇಟೆ : ರೈಲ್ವೆ ಹಳಿಗೆ ಮರ ಅಡ್ಡಲಾಗಿ ಬಿದ್ದಿರುವುದರಿಂದ ಇಂಟರ್ ಸಿಟಿ ರೈಲು ಜಾಮ್ ಆಗಿದ್ದು ಅರಸಾಳು ಸಮೀಪದಲ್ಲಿ ನಿಂತು ಪ್ರಯಾಣಿಕರು ಪರದಾಡುವಂತಾಗಿದೆ.
ಶಿವಮೊಗ್ಗ – ಸಾಗರ ನಡುವೆ ರೈಲು ಸಂಚಾರ ವ್ಯತ್ಯಯವಾಗಿದೆ. ಮಧ್ಯಾಹ್ನ ಬೆಂಗಳೂರಿನಿಂದ ಹೊರಟಿದ್ದ ಇಂಟರ್‌ಸಿಟಿ ರೈಲಿಗೆ ಅಡ್ಡಲಾಗ ಸೂಡೂರು ಬಳಿ ಮರ ಬಿದ್ದಿದೆ. ವಿದ್ಯುತ್ ವಯರ್ ತುಂಡಾಗಿ ರೈಲಿನ ಮೇಲೆ ಬಿದ್ದಿದೆ ಎಂದು ರೈಲಿನಲ್ಲಿರುವ ಪ್ರಯಾಣಿಕರು ತಿಳಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟಿದ್ದ ಇಂಟರ್‌ಸಿಟಿ ರೈಲು, ರಾತ್ರಿ 7.47ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಟಿತ್ತು. ರಾತ್ರಿ 8.23ಕ್ಕೆ ಸೂಡೂರು ಬಳಿ ಇಂಟರ್ ಸಿಟಿ ರೈಲು ನಿಂತಿದೆ.
ಸದ್ಯ ರೈಲ್ವೆ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದು ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.