ತೀರ್ಥಹಳ್ಳಿ: ತಾಲೂಕು ಆಡಳಿತ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಸಹಕಾರದಲ್ಲಿ ನಡೆಯುವ ರಾಜ್ಯೋತ್ಸವವನ್ನು ಸೋಮವಾರ ವಿಶಿಷ್ಠವಾಗಿ ಆಚರಿಸಲಾಗುತ್ತಿದೆ. ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಹಬ್ಬದ ವಾತಾವರಣಕ್ಕೆ ಸಾಂಸ್ಕೃತಿಕ ಸ್ಪರ್ಶವನ್ನು ನೀಡಲಾಗಿದೆ.
ಕೊರೊನಾ ಸೋಂಕಿನ ಕಾರಣ ಎರಡು ವರ್ಷಗಳಿಂದ ಅಷ್ಟೊಂದು ಸಂಭ್ರಮಾಚರಣೆ ಇರಲಿಲ್ಲ. ಈ ವರ್ಷ ಉತ್ತಮವಾಗಿ ಆಚರಿಸಬೇಕು ಎನ್ನುವ ಆಶಯ ತಾಲೂಕಿನ ಜನತೆಯಲ್ಲಿತ್ತು. ಆದರೆ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಸಮಾರಂಭ ತಾಲೂಕಿನಲ್ಲಿ ಆಚರಿಸುತ್ತಿದ್ದು ಈ ಬಾರಿಯೂ ಸಮಾರಂಭ ಹಮ್ಮಿಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಜನತೆಗೆ ಮಾಹಿತಿಯನ್ನು ನೀಡುವ ಮಾಧ್ಯಮಗಳಿಗೆ ಸಮಾರಂಭದ ಸೂಚನೆ ಕೊಟ್ಟಿಲ್ಲ.
ಹೀಗಾಗಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪತ್ರಿಕಾ ವರದಿಗಾರರು ಹೋಗಬೇಕೋ ಬೇಡವೋ ಎನ್ನುವ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ ಮುಂದಾದರೂ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕ್ರಮ ಕೈಗೊಳ್ಳಲಿ. ಹಾಗೆಯೇ ಪ್ರತಿ ಸರ್ಕಾರಿ ಕಾರ್ಯಕ್ರಮಗಳು, ಕನ್ನಡಪರ ಕಾರ್ಯಕ್ರಮಗಳು, ಸರ್ಕಾರಿ ಹಬ್ಬಗಳು ಮನೆಮನೆಗೆ ತಲುಪುವಂತಾಗಲಿ.
ವರದಿ : ಶ್ರೀಕಾಂತ್. ವಿ.ನಾಯಕ್. ತೀರ್ಥಹಳ್ಳಿ