Thirthahalli | ಗುಡ್ಡೆಕೊಪ್ಪ ಶಾಲೆಯಲ್ಲಿ ಕುಟುಂಬಸ್ಥರೊಂದಿಗೆ ಮತದಾನ ಮಾಡಿದ ಆರಗ ಜ್ಞಾನೇಂದ್ರ
ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ರವರು ಗುಡ್ಡೆಕೊಪ್ಪ ಸರ್ಕಾರಿ ಶಾಲೆಗೆ ಕುಟುಂಬಸ್ಥರೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ಕುಟುಂಬಸ್ಥರೊಂದಿಗೆ ಗುಡ್ಡೆಕೊಪ್ಪ ಸರ್ಕಾರಿ ಶಾಲೆಗೆ ಆಗಮಿಸಿದ ಅವರು ಮತ ಚಲಾಯಿಸಿ ಮಾತನಾಡಿ ಎಲ್ಲಾರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸೋಣ ಎಂದರು.
ಈ ಸಂಧರ್ಭದಲ್ಲಿ ಪತ್ನಿ , ಪುತ್ರ ಅಭಿನಂದನ್ ,ಸೊಸೆ ಶ್ರುತಿ ಅಭಿನಂದನ್ ಹಾಗೂ ಇನ್ನಿತರರಿದ್ದರು.