ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಸಹಸ್ರಾರು ವರುಷಗಳ ಇತಿಹಾಸ ಪ್ರಸಿದ್ದ ಶ್ರೀ ಜಗದ್ಗುರು ರಂಭಾಪುರಿ ಖಾಸಾ ಶಾಖಾ ಶ್ರೀಮಾನ್ ಮಹಾಸಂಸ್ಥಾನ ಮಳಿಲಿಮಠ ಕೋಣಂದೂರು ಇಲ್ಲಿ ದಿನಾಂಕ 18.11.2021 ರಂದು ಕಾರ್ತಿಕ ದೀಪೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ಏರ್ಪಡಿಸಲಾಗಿದೆ.
ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ರಂಭಾಪುರಿ ಪೀಠ ಬಾಳೆಹೊನ್ನೂರು ಇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮದ್ ರಂಭಾಪುರಿ ಶ್ರೀಮನ್ ಮಹಾಸಂಸ್ಥಾನ ಮಳಲಿ ಮಠದ ಶ್ರೀ .ಷ .ಬ್ರ .ಡಾ// ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಲ್ಲಾ ರಾಜಕೀಯ ಪಕ್ಷದ ಪ್ರಮುಖರು ಹಾಗೂ ಗಣ್ಯವ್ಯಕ್ತಿಗಳು ಹಾಜರಿರುವವರು. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೀಪೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಕೋಣಂದೂರು ಉದ್ಯಮಿ ಕೆ.ಆರ್.ಪ್ರಕಾಶ್, ಎನ್.ವರ್ತೇಶ್ ರಿಪ್ಪನ್ ಪೇಟೆ, ಮೋಹನ್ ಜನನಿ, ಧರ್ಮರಾಜ್ ಸಮಟಗಾರು, ಹೆಚ್.ಎಸ್ ಸತೀಶ್ ಹಾರೋಹಿತ್ತಲು,ರಾಜೇಂದ್ರ ಘಂಟೆ,ಕಾರ್ತಿಕ್ ರಿಪ್ಪನ್ ಪೇಟೆ,ನಿರಂಜನ್ ರಿಪ್ಪನ್ ಪೇಟೆ ಹಾಗೂ ಇನ್ನಿತರರು ಹಾಜರಿದ್ದರು.