ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರೆಂಬ ಹೆಗ್ಗಳಿಕೆಗೆ ಪಾತ್ರರಾದವರು ಕನಕದಾಸರು. ಕನಕದಾಸರದು ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರು. ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂಥ ಉಪದೇಶಗಳನ್ನು ನೀಡಿದವರು.
ನವೆಂಬರ್ 22ರಂದು ಇವರ ಜನ್ಮದಿನ, ಈ ದಿನದ ನಿಮಿತ್ತ ನಾಡಿನಲ್ಲಿ ಕನಕ ಜಯಂತಿಯನ್ನು ಆಚರಿಸಲಾಗುತ್ತದೆ. ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಗೆ ಸೀಮಿತವಾಗದ ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ.
ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ. ಈ ಹಿನ್ನೆಲೆ ನಾವಿಂದು ಕನಕದಾಸರ ಜೀವನ ಸಾರ ಹೇಳುವ ಹೇಳಿಕೆಗಳ ಮೂಲಕ ಕನಕ ಜಯಂತಿ ಶುಭಾಶಯಗಳನ್ನು ಹೇಳಲಿದ್ದೇವೆ. ವಾಟ್ಸಾಪ್, ಪೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂಥ ಆದರ್ಶಪೂರ್ಣ ಹೇಳಿಕೆಗಳು ಇಲ್ಲಿವೆ:
ನೀ ಮಾಯೆಯೊಳಗೋ
1. ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ದೇಹದೊಳಗೋ ನಿನ್ನೊಳು ದೇಹವೋ
ಕಾಗಿನೆಲೆಯಾದಿಕೇಶವ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ
ಕನಕದಾಸ ಜಯಂತಿಯ ಶುಭಾಶಯಗಳು
ಅದುವೇ ಮಡಿ
2. ಬಟ್ಟೆ ನೀರೊಳಗೆ ಅದ್ದಿ ಒಣಗಿಸಿ
ಉಟ್ಟುಕೊಂಡರೆ ಅದು ಮಡಿಯಲ್ಲ
ಹೊಟ್ಟೆಯೊಳಗಿನ ಕಾಮ, ಕ್ರೋಧಾದಿಗಳನು
ಬಿಟ್ಟು ನಡೆದರೆ ಅದು ಮಡಿ
ಕನಕದಾಸ ಜಯಂತಿಯ ಶುಭಾಶಯಗಳು
ಪರಸತಿಯ ನೋಡದಿರು
3. ಪರಸತಿಯ ನೋಡದಿರು, ದುರ್ಜನರ ಕೂಡದಿರು
ಗರ್ವದ ಮಾತುಗಳನ್ನು ಆಡದಿರು
ಕೈಯಹಿಂದೆಗೆವ ಹೇಡಿಯನ್ನು ಬೇಡದಿರು
ಬೀದಿಗೂಳುಂಬ ದೈವಗಳನ್ನು ಕೊಂಡಾಡದಿರು
ಕನಕದಾಸ ಜಯಂತಿಯ ಶುಭಾಶಯಗಳು
ಕುಲದ ನೆಲೆಯನ್ನು ಬಲ್ಲಿರಾ?
4. ಕುಲ, ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ
ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ?
ಆತ್ಮ, ಜೀವ, ಗಾಳಿ, ನೀರು, ಅನ್ನ ಯಾವ ಕುಲ?
ಕನಕದಾಸ ಜಯಂತಿಯ ಶುಭಾಶಯಗಳು
ಧಾನ್ಯವ ನೋಡಿ ಬಿತ್ತಿರಯ್ಯ
5. ತನುವ ನೇಗಿಲ ಮಾಡಿ ಹೃದಯ ಹೊಲವನು ಮಾಡಿ
ತನ್ವಿರಾ ಎಂಬ ಎರಡೆತ್ತ ಹೂಡಿ
ಜ್ಞಾನವೆಂಬೋ ಮಿಣೆಯ ಕಟ್ಟು ಹಗ್ಗವ ಮಾಡಿ
ಧ್ಯಾನವೆಂಬ ಧಾನ್ಯವ ನೋಡಿ ಬಿತ್ತಿರಯ್ಯ
ಕನಕದಾಸ ಜಯಂತಿಯ ಶುಭಾಶಯಗಳು
ಸದಾಶಿವನ ದಾಸನಾಗಬೇಕು
6. ಮೋಕ್ಷ ಸಿಗಬೇಕೆಂದರೆ ನಾನು ಎಂಬಾಸೆ ಬಿಟ್ಟು ದಾಸನಾಗಬೇಕು, ಸದಾಶಿವನ ದಾಸನಾಗಬೇಕು
ಕನಕದಾಸ ಜಯಂತಿಯ ಶುಭಾಶಯಗಳು
ಜ್ಞಾನ ಭಕ್ತಿ ಅದುವೇ ದೊಡ್ಡದು
7. ಹಿಂದೆ ನನ್ನ ಬೈದವರೆಲ್ಲ ಚಂದಾಗಿರಲಿ
ಮುಂದೆ ಎನ್ನ ಬಯ್ಯುವರೆಲ್ಲ್ ಅಂದಣ ಏರಲಿ
ಏನು ವಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು
ಜ್ಞಾನ ಭಕ್ತಿ ಕೊಡು ನನಗೆ ಅದುವೇ ದೊಡ್ಡದು
ಕನಕದಾಸ ಜಯಂತಿಯ ಶುಭಾಶಯಗಳು
ಸುಜ್ಞಾನಿ
ಅಜ್ಞಾನಿಗಳೊಡನೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳೊಡನೆ ಜಗಳವಾಡುವುದೇ ಲೇಸು
ಕನಕದಾಸ ಜಯಂತಿಯ ಶುಭಾಶಯಗಳು
ನೆಂಟರ ಬಾಗಿಲ ಸೇರಬಾರದು
ಅಡಿ ಸತ್ತ ಮಡಿಕೆಯನು ಜೋಡಿಸಿ ಒಲೆಗುಂಡು ಹೂಡಬಾರದು
ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು
ಕನಕದಾಸ ಜಯಂತಿಯ ಶುಭಾಶಯಗಳು
ಎಲ್ಲವೂ ನಿಷ್ಫಲ
ಮನದಲ್ಲಿ ಕಪಟವಿಟ್ಟುಕೊಂಡು ಎಷ್ಟು ಜಪ ಮಾಡಿದರೇನು ಫಲ? ವೇದ ಶಾಸ್ತ್ರಗಳನ್ನೋದಿ ಬಾಯಾರಿದರೆ ಏನು ಫಲ?
ಹೊಳೆಯೊಳಗೆ ಮುಳುಗಿ ತಪ ಮಾಡಿದರೇನು ಫಲ? ಮನದಲ್ಲಿ ಕಪಟವಿರುವಾಗ ಎಲ್ಲವೂ ನಿಷ್ಫಲ
ಎಲ್ಲಾ ಓದುಗರಿಗೆ ಕನಕದಾಸ ಜಯಂತಿಯ ಶುಭಾಶಯಗಳು.