January 11, 2026

ರಿಪ್ಪನ್ ಪೇಟೆ : ಆಲುವಳ್ಳಿ,ಕೆಂಚನಾಲ ಸುತ್ತಮುತ್ತ ಆಕಾಶದಲ್ಲಿ ವಿಚಿತ್ರ ಕೌತುಕ : ಬೆಚ್ಚಿಬಿದ್ದ ಜನರು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಆಲುವಳ್ಳಿ ಹಾಗೂ ಕೆಂಚನಾಲ ಗ್ರಾಮದಲ್ಲಿ ಇಂದು ಸರಿಯಾಗಿ ಆಕಾಶದಲ್ಲಿ ಸಾಲು ಸಾಲಾಗಿ ಸಣ್ಣ ಸಣ್ಣ ದೀಪಗಳು ಹಾದು ಹೋಗಿ ಅಚ್ಚರಿ ಮೂಡಿಸಿವೆ.

ಬಾಹ್ಯಾಕಾಶದಲ್ಲಿ ನಡೆಯುವ‌ ಕೌತುಕಗಳಿಗೆ ಕೊನೆಯೇ ಇಲ್ಲ. ಆಕಾಶದಲ್ಲಿ ಅದೇ ನಕ್ಷತ್ರ, ಅದೇ ಚಂದ್ರ, ಅದೇ ಸೂರ್ಯ ಇದ್ದಿದ್ದರೆ ಯಾವ ಕುತೂಹಲವೂ ಅನುಸುತ್ತಿರಲಿಲ್ಲ. ಆದರೆ ಬಾಹ್ಯಾಕಾಶದಲ್ಲಿ ಏಕಾಏಕಿ ಲೈಟ್ ಗಳ ಸರಣಿ ಹಾದು ಹೋದರೆ ನಿಮ್ಮನ್ನ ಅಚ್ಚರಿ ಪಡಿಸದೆ ಇರದು.

ಇಂತಹ ಒಂದು ಕೌತುಕಕ್ಕೆ ಹೊಸನಗರ ತಾಲೂಕಿನ ಕೆಂಚನಾಲ,ಆಲುವಳ್ಳಿ ಗ್ರಾಮದಲ್ಲಿ ಈ ಕೌತುಕ ಕಾಣಿಸಿದೆ ಆಕಾಶದಲ್ಲಿ ಸಾಲು ಸಾಲಾಗಿ ಬೆಳಕಿನ ದೀಪ ಹಾದು ಹೋಗಿದೆ. ಏಕಕಾಲಕ್ಕೆ 50 ಸಣ್ಣಸಣ್ಣ ದೀಪಗಳು ಕಂಡು ಮಾಯವಾಗಿದೆ. ಸ್ಥಳೀಯ ಜನ ಇದರ ಬಗ್ಗೆ ಮಾಹಿತಿ ಇಲ್ಲದ ಕಾರಣ ಏನೇನೋ ಊಹಿಸಿಕೊಂಡಿದ್ದಾರೆ.

ಇದು ಹಾರುವ ತಟ್ಟೆಯೋ‌ ಅಥವಾ ಧೂಮಕೇತುಗಳೋ ಎಂಬುವುದನ್ನು ತಿಳಿಯಲು ಕಾದು ನೋಡಬೇಕಾಗಿದೆ.


ಕೌತುಕವನ್ನು ವೀಕ್ಷಿಸಲು ಈ ಕೆಳಗಿನ ವೀಡಿಯೋ ವೀಕ್ಷಿಸಿ 👇👇


About The Author

Leave a Reply

Your email address will not be published. Required fields are marked *