ಹೊಸನಗರ : ಅಡಕೆ ಬೆಳೆಗಾರರ ಮನೆ ಮಾತಗಿರುವ ಡಾ ಸಾಯಿಲ್ ಜೈವಿಕ ಗೊಬ್ಬರದ ಶಾಖೆ ಈಗ ಹೊಸನಗರದಲ್ಲೂ ಪ್ರಾರಂಭವಾಗಿದೆ.
ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದಿರುವ ಮತ್ತು ಹೊಸನಗರದ ಕೃಷಿ ಇಲಾಖೆ ವತಿಯಿಂದ ದೃಡೀಕರಿಸಿ ಪರವಾನಿಗೆ ನೀಡಲಾಗಿರುವ ವೀರಭದ್ರೇಶ್ವರ ಟ್ರೇಡರ್ಸ್ ಶುಭಾರಂಭಗೊಂಡಿದೆ.
ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಗುರುಶಕ್ತಿ ಟ್ರಾನ್ಸ್ ಪೋರ್ಟ್ ಮಾಲೀಕರಾದ ವಿದ್ಯಾದರ್ ಜೈವಿಕ ಗೊಬ್ಬರಗಳು ಅಡಕೆ, ಕಬ್ಬು, ತೆಂಗು ಮತ್ತು ಎಲ್ಲಾ ರೀತಿಯ ಬೆಳೆಗಳಿಗೆ ಲಭ್ಯ. ಜೈವಿಕ ಗೊಬ್ಬರಗಳ ಬಳಕೆ ಇಂದ ಭೂಮಿಯಲ್ಲಿ ತ್ವರಿತವಾಗಿ ಸೂಕ್ಷ್ಮಾಣು ಜೀವಿಗಳು ಹಾಗು ಎರೆಹುಳುಗಳು ಅಭಿರುದ್ದಿ ಆಗುವುದರೊಂದಿಗೆ ಫಲವತ್ತತೆ ಹೆಚ್ಚಿಸಿ ಉತ್ತಮ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತವೆ ಎಂದರು.
ನಂತರ ಸಂಸ್ಥೆಯ ಮಾಲೀಕರಾದ ಆದರ್ಶ್ ಹೆಚ್ ಜಿ ಮಾತನಾಡಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುವುದರ ಜೊತೆಗೆ ಬೆಳೆಗಳ ಆಯಸ್ಸು ಕೂಡ ಕಡಿಮೆಯಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಯಥೇಚ್ಛ ಬಳಕೆಯಿಂದ ರೈತರ ಆರೋಗ್ಯದ ಮೇಲೂ ಅನೇಕ ದುಷ್ಪರಿಣಾಮಗಳು ಆಗುತ್ತಿರುವುದಂತೂ ಸತ್ಯ.
ಇಂದು ಹೆಚ್ಚಿನ ಕೃಷಿ ರಾಸಾಯನಿಕ ರಸಗೊಬ್ಬರಗಳ ಮೂಲಕ ನಡೆಯುತ್ತಿದೆ. ಪೂರ್ಣ ಪ್ರಮಾಣದಲ್ಲಿ ಅಥವಾ ಆಮ್ಶಿಕವಾಗಿ ಈ ಗೊಬ್ಬರಗಳನ್ನು ಬಳಸುವವರು ತುಂಬಾ ಕೃಷಿಕರು ಇದ್ದಾರೆ. ಇವುಗಳ ಲಭ್ಯತೆ ಕೆಲವು ಸಮಯ ಹಿಂದಿನ ವರೆಗೆ ಸಾಕಷ್ಟು ಇತ್ತು. ಈಗ ಕೆಲವೇ ಗೊಬ್ಬರಗಳು ಮಾತ್ರ ಲಭ್ಯ ಇದೇ. ಮುಖ್ಯವಾಗಿ ಪೊಟಾಷ್ ಸಿಗುವುದೇ ಇಲ್ಲ. ಇದಕ್ಕೇನು ಕಾರಣ. ಸರಿಯಾದ ಸಮಯಕ್ಕೆ ಗೊಬ್ಬರ ಸಿಗದಿದ್ದರೆ ರೈತರ ಗತಿ ಏನು…?ಹೊರಗಿನಿಂದ ಬೆಲೆ ಕೊಟ್ಟು ಖರೀದಿ ಮಾಡುವ ಗೊಬ್ಬರ ನಂಬಿ ಕೃಷಿಗಿಳಿದವರಿಗೆ ಕಷ್ಟದ ದಿನಗಳು ಪ್ರಾರಂಭ ಆಗಿದೆ. ಕೇಂದ್ರ ಸರ್ಕಾರ ಸಾವಯವ ಕೃಷಿಗೆ ಪ್ರೋತ್ಸಾಹ ಮತ್ತು ರಾಸಾಯನಿಕ ಬಳಕೆಯನ್ನು ನಿರುತ್ತೇಜಿಸುವ ತಂತ್ರಗಳನ್ನು ಜ್ಯಾರಿ ಮಾಡಲಿದೆ. ರಾಸಾಯನಿಕ ಗೊಬ್ಬರ ತಯಾರಿಕೆಗೆ ಬೇಕಾಗುವ ಹೊರದೇಶಗಳಿಂದ ಬರುವ ಕಚ್ಚಾವಸ್ತುಗಳ ಆಮದಿನ ಮೇಲೆ ನಿಯಂತ್ರಣ ಹೆಚ್ಚೆಚ್ಚು ಬಿಗಿಯಾಗುತ್ತ್ತಾ ಹೋದೀತು. ಇನ್ನು ಕೆಲವೇ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರ ನಿಲ್ಲಲೂಬಹುದು.ಆದ್ದರಿಂದ ಡಾ ಸಾಯಿಲ್ ಜೈವಿಕ ಗೊಬ್ಬರವೇ ರೈತರಿಗೆ ಪರಿಹಾರವಾಗಿದೆ ಎಂದರು.
ಈ ಸಂಧರ್ಭದಲ್ಲಿ ಡಾ.ದಿನಮಣಿ,ಮಹೇಂದ್ರ ಗೌಡ ರಿಪ್ಪನ್ ಪೇಟೆ, ಗುರುಬಸಪ್ಪ ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ವೀರಭದ್ರೇಶ್ವರ ಟ್ರೇಡರ್ಸ್
ಗುರುಶಕ್ತಿ ಕಟ್ಟಡ, ಶಿವಮೊಗ್ಗ ರಸ್ತೆ, ಹೊಸನಗರ – 577418
8050281665, 9902013235