ಬಡಮಕ್ಕಳ ಶಿಕ್ಷಣದಿಂದ ಸಮಾಜ ಸುಶಿಕ್ಷಿತ : ಕೋಣಂದೂರು ಶ್ರೀ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ರಿಪ್ಪನ್‌ಪೇಟೆ: ಬಡಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ. ಎಂಬ ಕಲ್ಪನೆಯಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೊಂದಿದ್ದರು ಎಂದು ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಿದ್ಧಗಂಗಾ ಶ್ರೀಗಳ ಭಕ್ತವೃಂದದವತಿಯಿಂದ ಇಂದು ಶ್ರೀ ಡಾ. ಶಿವಕುಮಾರಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಆರ್ಥಿಕ ಸಬಲರಲ್ಲದ ಗ್ರಾಮೀಣ ಭಾಗದ  ಮಕ್ಕಳಿಗೆ ಶಿಕ್ಷಣ ದುರ್ಲಬವಾಗಿದ್ದ ಸಂದರ್ಭದಲ್ಲಿ ಸ್ವಾಮೀಜಗೆ ಶ್ರೀಮಠದಲ್ಲಿ ವಿದ್ಯಾ ಕೇಂದ್ರವನ್ನು ತೆರೆದು ತನ್ಮೂಲಕ, ಅನ್ನ, ಅಕ್ಷರ ಮತ್ತು ಆರೋಗ್ಯ ನೀಡುವ ಸಂಕಲ್ಪ ಮಾಡಿದ್ದರು. ಅದರ ಪ್ರತಿಫಲವಾಗಿ ಪ್ರಸ್ತುತ ಹತ್ತಾರು ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಮಠದಿಂದ ಜ್ಞಾನ ಪಡೆದು ದೇಶವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತ ಸಮಾಜದ ಪ್ರಗತಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಅವರ ಸದ್ಧರ್ಮವನ್ನು ಪ್ರತಿಯೊಬ್ಬರುವ ಜೀವನದಲಿ ಅಳವಡಿಸಿಕೊಳ್ಳಬೇಕೆಂದರು.

ಈ ಸಂಧರ್ಭದಲ್ಲಿ ಸಮಾಜ ಸೇವೆ ಸಲ್ಲಿಸಿದ ಹೆಚ್.ಎಲ್. ಚಂದ್ರಶೇಖರ್ ರಿಪ್ಪನ್‌ಪೇಟೆ, ರಾಷ್ಟ್ರೀಯ ಯೋಗಾ ಪಟು ಕಾವ್ಯ ಕೆ.ಎನ್. ಗರ್ತಿಕೆರೆ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಮಹಾಲಕ್ಷಿ, ಭಕ್ತವೃಂದದ ಸಂಚಾಲಕ ಕಗ್ಗಲಿ ಲಿಂಗಪ್ಪ, ಈ ಸಭೆಯಲ್ಲಿ ಗ್ರಾಮದ ಹಿರಿಯರಾದ ಬೆಳಕೋಡು ಹಾಲಸ್ವಾಮಿಗೌಡ್ರು, ಟಿ.ಆರ್.ಕೃಷ್ಣಪ್ಪ, ಎಂ.ಡಿ.ಇಂದ್ರಮ್ಮ, ಆರ್.ಎನ್.ಮಂಜುನಾಥ, ಹೆಚ್.ವಿ.ಈಶ್ವರಪ್ಪಗೌಡ ಹಾರೋಹಿತ್ಲು, ಬೆಳ್ಳೂರು ತಿಮ್ಮಪ್ಪ, ಜೆ.ಜಿ.ಸದಾನಂದ, ಆರ್ಯಮಿತ್ರ ಇನ್ನಿತರರು ಹಾಜರಿದ್ದು ಮಾತಾನಾಡಿದರು.

ಪ್ರಣತಿ ಅಣ್ಣಪ್ಪ ಪ್ರಾರ್ಥಿಸಿದರು. ಸೋಮಶೇಖರ್ ದೂನ ಸ್ವಾಗತಿಸಿದರು. ಆರ್ಯಮಿತ್ರ ಪ್ರಾಸ್ತವಿಕವಾಗಿ ಮಾತಾನಾಡಿದರು. ಕಗ್ಗಲಿ ಶಿವಪ್ರಕಾಶ್ ನಿರೂಪಿಸಿದರು. ರಿ.ರಾ.ಸೋಮಶೇಖರ್ ವಂದಿಸಿದರು. ನಂತರ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.

Leave a Reply

Your email address will not be published. Required fields are marked *