ವೈನ್ ಶಾಪ್ ನಲ್ಲಿ ಎಣ್ಣೆ ಸಾಲ ಕೊಡಲಿಲ್ಲವೆಂದು ರಸ್ತೆ ತಡೆ ನಡೆಸಿದ ಯುವಕ – ಹೀಗೊಂದು ಕುಡುಕನ ಕಿರಿಕ್ , ವೀಡಿಯೋ ವೈರಲ್ |
ವೈನ್ ಶಾಪ್ ನಲ್ಲಿ ಎಣ್ಣೇ ಸಾಲ ಕೊಟ್ಟಿಲ್ಲ ಎಂದು ಯುವಕನೊಬ್ಬ ನಡುರೋಡ್‌ನಲ್ಲಿ ಛತ್ರಿ ಹಿಡಿದು ರಸ್ತೆತಡೆಯನ್ನೆ ನಡೆಸಿರುವ ವಿಚಿತ್ರ ಘಟನೆಯೊಂದು ಶಿವಮೊಗ್ಗದ ಎನ್ ಟಿ ರಸ್ತೆಯಲ್ಲಿ ನಡೆದಿದೆ.
ಶಿವಮೊಗ್ಗದ ಹೊಸ ತೀರ್ಥಹಳ್ಳಿ(NT) ರೋಡ್‌ನಲ್ಲಿರುವ ಮದ್ಯದಂಗಡಿಗೆ ತೆರಳಿದ ಯುವಕನೊಬ್ಬ ಎಣ್ಣೆ ಕೊಡಿ ಆದರೆ ದುಡ್ಡು ಇಲ್ಲ ಅಂದಿದ್ದಾನೆ. ಹಣ ಕೊಡದೇ ಹೇಗಪ್ಪ ಎಣ್ಣೆ ಕೊಡೋದು ಎಂದು ಅಂಗಡಿಯವನು ಕೇಳಿದ್ದಾನೆ.? ಆಮೇಲೆ ಕೊಡುತ್ತೇನೆ ಎಣ್ಣೆ ಕೊಡು ಎಂದರು ಅಂಗಡಿಯಾತ ಎಣ್ಣೆ ಕೊಡದೇ ಓಡಿಸಿದ್ದಾನೆ.
ಅದಾಗಲೇ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ಯುವಕ ಎಣ್ಣೆಸಾಲ ಕೊಡಲ್ಲ ಎಂದು ಸಿಟ್ಟಿಗೆದ್ದು ಸೀದಾ ರೋಡಿಗೆ ಇಳಿದಿದ್ದಾನೆ. ಸುರಿಯುವ ಮಳೆಯ ನಡುವೆ ಶಿಸ್ತಾಗಿ ಛತ್ರಿ ಹಿಡಿದು ಎನ್‌ಟಿ ರೋಡ್ ಮಧ್ಯೆ ನಿಂತು ಪ್ರತಿಭಟನೆಗೆ ಇಳಿದಿದ್ದಾನೆ.ಯಾರು ಏನು ಹೇಳಿದರು ಕೇಳದೆ ಬರುವ ವಾಹನಗಳು ಮೈಮೇಲೆ ಬಂದಂತೆ ಬಂದರೂ ಜಗ್ಗದೆ ಕುಗ್ಗದೆ ನಿಂತು ಎಣ್ಣೆ ಬೇಕು ಎಂದು ಮೌನ ಪ್ರತಿಭಟನೆ ಮಾಡುತ್ತಿದ್ದ.
ಇನ್ನೂ ಇದೇ ವೇಳೆ ಅಲ್ಲಿಗೆ ಬಸ್ಸೊಂದು ಬಂದಿದೆ.ಎಷ್ಟೆ ಹಾರ್ನ್ ಮಾಡಿದರು ಈತ ಮಾತ್ರ ಜಪ್ಪಯ್ಯ ಅನ್ನಲಿಲ್ಲ. ಆ ಬಳಿಕ ಬಸ್‌ನ ಕಂಡಕ್ಟರ್ ಕೆಳಕ್ಕೆ ಇಳಿದು ಎಣ್ಣೆ ಆಸಾಮಿಯ ಅಹವಾಲನ್ನ ಕೇಳಿ ಆತನನ್ನ ಪಕ್ಕಕ್ಕೆ ಜರುಗಿಸಿ ಮುಂದಕ್ಕೆ ಸಾಗಿದ್ದಾರೆ. ಸುಮಾರು 20 ನಿಮಿಷ ಎಣ್ನೇ ಪ್ರೇಮಿಯ ಅವಾಂತರ ಎನ್‌ಟಿ ರೋಡ್‌ನಲ್ಲಿ ಸಾಗಿತ್ತು.
ಆ ಬಳಿಕ ಸ್ಥಳೀಯರು ಯುವಕನಿಗೆ ಬೈದು ರಸ್ತೆ ಬದಿಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಿ ಹಲವು ಮೊಬೈಲ್‌ಗಳು ಕುಡುಕನ ವಿಶೇಷ ಪ್ರತಿಭಟನೆಯನ್ನು ಸೆರೆ ಹಿಡಿದಿತ್ತು.