ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಇಂದಿನ ಯುವ ಸಮೂಹ ಸಮಾಜದಲ್ಲಿನ ಪ್ರತಿಯೊಬ್ಬರನ್ನು ಗೌರವಿಸುವಂತಾಗಬೇಕು. ಅಂತ ಮನೋಭಾವನೆಯನ್ನು ರಾಷ್ಟ್ರೀಯ ಸೇವಾಯೋಜನೆಯ ನೀಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ಮೂಲ ಉದ್ದೇಶ ಜಾತಿ ಮತ ಪಂಥಗಳ ಬೇಧವನ್ನು ಮರೆತು ಸದ್ಭಾವನೆಯಿಂದ ಎಲ್ಲರಲು ಬೆರೆತು ಸೇವೆಯನ್ನು ಮಾಡುವ ಉದ್ದೇಶವನ್ನು ಹೊಂದಲಿ ಜೊತೆಯಲ್ಲಿಯೆ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಆರೋಗ್ಯ ಶಿಕ್ಷಣ ಮತ್ತು ಪರಿಸರದ ಬಗ್ಗೆ ಅರಿವನ್ನು ಮೂಡಿಸುವುದರ ಜೊತೆಗೆ ಪರಿಸರದ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಹಾಗೆಯೇ ಇರುವ ಎಲ್ಲಾ ರಾಷ್ಟ್ರೀಯ ಸೇವಾಯೋಜನೆಯ ಶಿಬಿರಾರ್ಥಿಗಳು ವಾರ್ಷಿಕ ಶಿಬಿರದಲ್ಲಿನ ಪಡೆದುಕೊಂಡಂತಹ ಅನುಭವಗಳನ್ನು ಮುಂದಿನ ತಮ್ಮ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ನಾಗರಿಕರಾಗಿ ಸಮಾಜದ ಮುಖ್ಯವಾಹಿನಿಗೆ ಬರಬಹುದು ಎಂದು ಹೇಳಿದರು.
ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ : ಸಮಾಜದಲ್ಲಿನ ಪ್ರತಿಯೊಬ್ಬರನ್ನು ಗೌರವಿಸಿ :ನಾಗರಾಜ ಪರಿಸರ.
ರಿಪ್ಪನ್ ಪೇಟೆ : ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಶಿಕ್ಷಣ ಪಡೆಯುತ್ತಿರುವ ಯುವ ಸಮೂಹ ಪ್ರತಿಯೊಬ್ಬರನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನೆ ಅಧಿಕಾರಿ ಡಾ. ನಾಗರಾಜ ಪರಿಸರ ಹೇಳಿದರು.
ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ತಮ್ಮ ಶೈಕ್ಷಣಿಕ ಚಟುವಟಿಕೆಯ ಜೋತೆಗೆ ಸಮಾಜದ ಸೇವೆಯಲ್ಲಿ ತೊಡಿಗಿಕೊಳ್ಳಲಿ ಎನ್ನುವ ಸದುದ್ದೇಶ ದಿಂದ ನಮ್ಮ ಕಾಲೇಜ್ ನಲ್ಲಿ ಎನ್. ಎಸ್. ಎಸ್. ಘಟಕ ರಚನೆ ಯಾಗಿದ್ದು ವಿದ್ಯಾರ್ಥಿಗಳು ಸಮಾಜ ಸೇವೆಯ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಅನುವು ಮಾಡಿ ಕೊಡಲಾಗಿದೆ ಎಂದರು.
ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಹೆದ್ದಾರಿ ಪುರ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ. ಗ್ರಾಮ ಪಂಚಾಯತಿ ಸದಸ್ಯೆ ಕವಿತಾ.ಎನ್. ಎಸ್. ಎಸ್. ಅಧಿಕಾರಿಗಳಾದ ದೇವರಾಜ್. ಶಿಲ್ಪಾ ಪಾಟೀಲ್.ಹಾರಂಬಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೋಹನ್. ಎಸ್. ಡಿ. ಎಂ. ಸಿ. ಅಧ್ಯಕ್ಷ ವಿಜೇಯೇಂದ್ರ.ಉಪನ್ಯಾಸಕರಾದ ಡಾ. ತಿಪ್ಪೇಸ್ವಾಮಿ.ಶ್ರೀಧರ್.ರವೀಂದ್ರ. ಡಿ.ಸೀತಾರಾಮ. ಗಣಪತಿ. ಇನ್ನಿತರರಿದ್ದರು.
ಎನ್ಎಸ್ ಎಸ್ ಶಿಬಿರಾರ್ಥಿಗಳಾದ ಮಾನಸ ಕಾರ್ಯಕ್ರಮವನ್ನು ನಿರೂಪಿಸಿ ಪೂಜಾ ಸ್ವಾಗತಿಸಿ ಎನ್. ಎಸ್. ಅಧಿಕಾರಿ ದೇವರಾಜ್ ವಂದಿಸಿದರು