ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಅರಣ್ಯ ವಲಯದ ಆಗುಂಬೆ ಗ್ರಾಮ ಪಂಚಾಯಿತಿಯ ಹೊಸೂರು ಬಳಿಯ ಅಸಿಮನೆಯಲ್ಲಿ ಕಾಡುಕೋಣವೊಂದು ರೈತರೊಬ್ಬರಿಗೆ ತಿವಿದ ಘಟನೆ ಸೋಮವಾರ ಸಂಜೆ ನಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ.
ಅಸಿಮನೆ ರಾಘವೇಂದ್ರ ಭಟ್ ಎಂಬುವರ ತೋಟಕ್ಕೆ ಬಂದಿದ್ದ ಕಾಡು ಕೋಣಗಳನ್ನು ರಾಘವೇಂದ್ರ ಭಟ್ ಮತ್ತು ಅವರ ಪತ್ನಿ ತೋಟದಿಂದ ಬೆರೆಸಲು ಹೋಗಿದ್ದಾಗ ಏಕಾಏಕಿ ಹೊಟ್ಟೆಗೆ ಇರಿದಿದೆ. ಗಂಭೀರ ಗಾಯಗೊಂಡ ರಾಘವೇಂದ್ರ ಭಟ್ ಅವರನ್ನು ಆಗುಂಬೆ ಭಾಗದ ಪ್ರಮುಖ ನಾಯಕ ಹಸಿರುಮನೆ ನಂದನ್ ಮತ್ತು ಸ್ನೇಹಿತರು ತಮ್ಮ ಕಾರಲ್ಲೇ ಕರೆದೋಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ 108ಆಂಬುಲೆನ್ಸ್ ಮೂಲಕ ಮಣಿಪಾಲಕ್ಕೆ ಕಳುಹಿಸಲಾಯಿತು. ಇದೀಗ ಚೇತರಿಕೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ಆಗುಂಬೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಹಸಿರುಮನೆ ಹಾಗೂ ಅವರ ಸ್ನೇಹಿತರುಗಳು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡ ರಾಘವೇಂದ್ರ ಭಟ್ ಅವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂದನ್ ರವರ ಪ್ರಾಮಾಣಿಕ ಸೇವೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.
ತೀರ್ಥಹಳ್ಳಿ ಹೊಸನಗರ ಭಾಗದಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗುತ್ತಿದ್ದು, ಕಳೆದ 6 ತಿಂಗಳ ಹಿಂದೆ ನಾಲೂರು ಬಳಿಯ ಕಾಡಬೈಲ್ ಸುರೇಶ ಎಂಬುವವರಿಗೆ ಕಾಡುಕೋಣ ತಿವಿದು ಅವರು ಗಂಭೀರ ಗಾಯಗೊಂಡಿದ್ದರು.