w
Headlines
Home » ಕೆಂಚನಾಲ ಗ್ರಾಮದಲ್ಲಿ ಮತಾಂತರಗೊಳ್ಳುವಂತೆ ಮಹಿಳೆಗೆ ಜೀವ ಬೆದರಿಕೆ : ದೂರು ದಾಖಲು

ಕೆಂಚನಾಲ ಗ್ರಾಮದಲ್ಲಿ ಮತಾಂತರಗೊಳ್ಳುವಂತೆ ಮಹಿಳೆಗೆ ಜೀವ ಬೆದರಿಕೆ : ದೂರು ದಾಖಲು

ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೆಂಚನಾಳ ಗ್ರಾಮದಲ್ಲಿ ಸರ್ವೆ ನಂಬರ್ 38/1 ರಲ್ಲಿ ಜಯಲಕ್ಷ್ಮೀ ಎಂಬುವರು ತಮ್ಮ ಸ್ವಂತ ತೋಟದಲ್ಲಿ ಕೆಲಸ ಮಾಡುವ ವೇಳೆ ಸಂಬಂಧಿಕರಾದ ಮಂಜಪ್ಪ ಮತ್ತು ಸಂಗೀತ ಎಂಬುವರು ಏಕಾಏಕಿ ತೋಟಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಮಹಿಳೆಯನ್ನ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ.

ನಿನಗೆ ಯಾರೂ ಇಲ್ಲ ನಿನಗೆ ಜಮೀನು ಏನಕ್ಕಾಗಿ.. ನಾವುಗಳೆಲ್ಲಾ ಕ್ರಿಶ್ಚಿಯನ್ ಧರ್ಮಕ್ಕೆ‌ ಮತಾಂತರಗೊಂಡಂತೆ ನೀನು ಸಹ ಮತಾಂತರಗೊಂಡರೆ ನಿನಗೆ ಜೀವನ ಮಾಡಲು ಬಿಡುತ್ತೇವೆ. ಇಲ್ಲವಾದಲ್ಲಿ ನಿನ್ನ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. 

ಈ ಸಂಧರ್ಭದಲ್ಲಿ ಜಯಲಕ್ಷ್ಮೀ ಯ ಪತಿ ದಿ.ರಾಜು ರವರ ಸಹೋದರ ಸಂಜಯ್ ಮತ್ತು ನಾಗರತ್ನ ರವರು ಸಹ ಮತಾಂತರಗೊಳ್ಳುವಂತೆ ಜಯಲಕ್ಷ್ಮಿ ರವರಿಗೆ ಬಲವಂತ ಮಾಡಿದ್ದಾರೆ.


ಈ ವೇಳೆ ಅಲ್ಲೇ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ರಾಜೇಗೌಡ ಮತ್ತು ಇಮಾಮ್ ಸಾಬ್ ಅವರು ಜಗಳ ಬಿಡಿಸಿ ಈ ಬಗ್ಗೆ ಪಂಚಾಯಿತಿ ನಡೆಸುವುದಾಗಿ ಸಲಹೆ ನೀಡಿದ್ದರು. 

ಪಂಚಾಯಿತಿ ನಡೆಯದ ಕಾರಣ ಎರಡು ದಿನ ಕಾದು ನಂತರ ಜಯಲಕ್ಷ್ಮೀ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.