Headlines

ಕ್ಷುಲ್ಲಕ್ಕ ವಿಚಾರಕ್ಕೆ ಹಿಂದೂ ಯುವಕನ ಮೇಲೆ ಗುಂಪಿನಿಂದ ಹಲ್ಲೆ , ಆಸ್ಪತ್ರೆಗೆ ದಾಖಲು : ಆಸ್ಪತ್ರೆಗೆ ಹಿಂದೂ‌ ಮುಖಂಡ ಧೀನ್ ದಯಾಳ್ ಭೇಟಿ

ಶಿವಮೊಗ್ಗ: ಹೂವಿನ ಮಾರ್ಕೆಟ್‌ನಲ್ಲಿ ಕೆಲಸ ಮಾಡುವ ಮಧು (21) ಎಂಬ ಯುವಕನಿಗೆ ಗಾಂಜಾ ಮತ್ತಿನಲ್ಲಿದ್ದ ಯುವಕರು ಹಲ್ಲೆ ನಡೆಸಿದ್ದಾರೆ. 

ಇಂದು ಮಧ್ಯಾಹ್ನ ಮಂಡ್ಲಿಯ ಮೊದಲನೇ ಕ್ರಾಸ್‌ನಲ್ಲಿ ಹೂ ಕೊಡಲು ಹೋದಾಗ ಮೂರು ಬೈಕ್‌ನಲ್ಲಿ ಬಂದ ಆರು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ನಿಲ್ದಾಣದ ಬಳಿ ಶ್ರೀನಿವಾಸ್ ಫ್ಲವರ್ ಸ್ಟಾಲ್ ಬಳಿ ಕೆಲಸ ಮಾಡುತ್ತಿದ್ದ ಯುವಕ ಮಧು ಪ್ರತಿ ನಿತ್ಯ ನ್ಯೂಮಂಡ್ಲಿಯಲ್ಲಿರುವ ಹೂವಿನ ಗ್ರಾಹಕರಿಗೆ ಹೂವು ಕೊಟ್ಟು ಬರುತ್ತಿದ್ದನು.

ಇಂದು ಹೂವು ಕೊಟ್ಟು ಬೈಕ್ ನಲ್ಲಿ ವಾಪಾಸ್ ಬರುವ ವೇಳೆ ನ್ಯೂ ಮಂಡ್ಲಿ ಮೊದಲನೇ ತಿರುವಿನ ಬಳಿ ಮೂರು ಜನ ಅನ್ಯ ಕೋಮಿನ ಯುವಕರು ತಡೆದಿದ್ದಾರೆ.ಏಕೆ ತಡೆದಿದ್ದೀರಿ ಎಂದು ಕೇಳಿದ್ದಕ್ಕೆ ಒಬ್ಬ ಏಕಾಏಕಿ ಹಲ್ಲೆ ನಡೆಸಿದ್ದಾನೆ. ನಂತರ ಮೂವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಿಂತಿರುಗಿ ನೋಡಿದಾಗ ಇತರೆ ಮೂವರು ಹುಡುಗರು ಲಾಂಗು ಮಚ್ಚು ಝಳಪಿಸುತ್ತಾ ಹಲ್ಲೆ ನಡೆಸಲು ಮುಂದಾಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಮಧು ಮೂವರನ್ನು ತಳ್ಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ.

 ನಂತರ ಸ್ನೇಹಿತರಿಗೆ ಸ್ನೇಹಿತರಿಗೆ ವಿಷಯ ಹೇಳಿದ್ದಾನೆ. ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಹಿಂದೂ ಸಂಘಟನೆಯ ಧೀನ್ ದಯಾಳು ಮೆಗ್ಗಾನ್ ಗೆ ಭೇಟಿ ನೀಡಿ ಮಧು ಆರೋಗ್ಯವನ್ನು ವಿಚಾರಿಸಿದ್ದಾರೆ.

ಮಧುವಿಗೆ ಈ 7 ತಿಂಗಳ ಹಿಂದಷ್ಟೆ ಲಿವರ್‌ ಆಪರೇಷನ್ ಆಗಿತ್ತು ಎಂದು ಹೇಳಲಾಗುತ್ತಿದೆ. ಆಪರೇಷನ್ ಆದ ಜಾಗಕ್ಕೆ ಮತ್ತೆ ಹೊಡೆತಬಿದ್ದಿದೆ. ಪ್ರಾಣಾಪಾಯದಿಂದ ಸಧ್ಯಕ್ಕೆ ಮಧು ಪಾರಾಗಿದ್ದಾನೆ.

ಈ ಹಲ್ಲೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಬದಲಿಗೆ ನ್ಯೂಮಂಡ್ಲಿ ಮೂರನೇ ತಿರುವಿನಲ್ಲಿ ಗಾಂಜಾ ಸೇವಿಸುತ್ತಿದ್ದ ಹಲ್ಲೇಕೋರರಿಗೆ ಮಧು ಈ ಹಿಂದೆ ಬುದ್ದಿ ಹೇಳಿದ್ದ. ಬುದ್ದಿ ಹೇಳಿದ್ದಕ್ಕೆ ಈ ದಾಳಿ ಆಗಿರ ಬಹುದು ಎಂದು ಅನುಮಾನಿಸಲಾಗುತ್ತಿದೆ.

Leave a Reply

Your email address will not be published. Required fields are marked *