Headlines

ಬೈಕ್ ನಲ್ಲಿ ಹೋಗುತಿದ್ದಾಗ ತಲೆ ಮೇಲೆ ತೆಂಗಿನಕಾಯಿ ಬಿದ್ದು ಯುವಕ ಕೋಮಾಗೆ – ತೋಟದ ಮಾಲೀಕನ ವಿರುದ್ದ ದೂರು | crime news


ಬೈಕ್ ನಲ್ಲಿ ಹೋಗುತಿದ್ದಾಗ ತಲೆ ಮೇಲೆ ತೆಂಗಿನಕಾಯಿ ಬಿದ್ದು ಯುವಕ ಕೋಮಾಗೆ – ತೋಟದ ಮಾಲೀಕನ ವಿರುದ್ದ ದೂರು 


ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರನೊಬ್ಬನ ತಲೆ ಮೇಲೆ ತೆಂಗಿನ ಕಾಯಿ ಬಿದ್ದು  ಕೋಮಾ ಕ್ಕೆ ಜಾರಿದ ಘಟನೆ ಸಂಬಂಧ ತಡವಾಗಿ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ ತೀರ್ಥಹಳ್ಳಿ ಹೆದ್ದಾರಿ 169 ನಲ್ಲಿ ಗಾಜನೂರು ಸಮೀಪ ಚೆಕ್‌ಪೋಸ್ಟ್‌ ಹತ್ತಿರದಲ್ಲಿರುವ ತೋಟದಲ್ಲಿನ ತೆಂಗಿನ ಮರ ಹೆದ್ದಾರಿ ಬದಿಗೆ ವಾಲಿಕೊಂಡಿದೆ. ಕಳೆದ ಏಳನೇ ತಾರೀಖು ಇದೇ ಮಾರ್ಗದಲ್ಲಿ 16 ವರ್ಷದ ಯುವಕನೊಬ್ಬ ಇನ್ನೊಬ್ಬರ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ. ಚೆಕ್‌ಪೋಸ್ಟ್‌ ಸಮೀಪ ಬರುವ ಹೊತ್ತಿಗೆ ಜೋರಾಗಿ ಗಾಳಿ ಬೀಸಿದ ಪರಿಣಾಮವಾಗಿ ತೆಂಗಿನ ಮರದಿಂದ ಕಾಯಿ ಬಿದ್ದಿದೆ. ಹೀಗೆ ಬಿದ್ದ ತೆಂಗಿನ ಕಾಯಿ ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ 16 ವರ್ಷದ ಯುವಕನ ತಲೆ ಮೇಲೆ ಬಿದ್ದಿದೆ. 


ಪರಿಣಾಮ ತೀವ್ರವಾಗಿ ಗಾಯಗೊಂಡ ಆತನನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಈಗ ಆತ ಕೋಮಕ್ಕೆ ಜಾರಿದ್ದಾನೆ. 

ಯ್ವಕನ ಪೋಷಕರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧೀಕಾರ ಹಾಗೂ ಬಿದ್ದ ತೆಂಗಿನಕಾಯಿಯ ಮರವಿರುವ ತೋಟದ ಮಾಲೀಕರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.

About The Author

Leave a Reply

Your email address will not be published. Required fields are marked *