ವಿದ್ಯುತ್ ತಂತಿ ಬೇಲಿಯ ಮೇಲೆ ಕೇಬಲ್ ಬಿದ್ದಿದ್ದು ಕೇಬಲ್ ನ್ನು ಮೂರು ವರ್ಷದ ಹೆಣ್ಣು ಮಗು ಮುಟ್ಟಿದ್ದರ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಮನೆ ಬಳಿ ಹಾಕಿರುವ ವಿದ್ಯುತ್ ತಂತಿ ಬೇಲಿಯ ಮೇಲೆ ಟಿವಿ ಕೇಬಲ್ ಹರಿದು ಬಿದ್ದಿದೆ. ಈ ಕೇಬಲ್ ನ್ನ ಆಟಾಡುವ ವೇಳೆ ಮಗು ಮುಟ್ಟಿದ ಹಿನ್ನಲೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಸಾವುಕಂಡಿದೆ.
ತಂತಿ ಬೇಲಿ ಮೇಲೆ ಕೇಬಲ್ ತುಂಡಾಗಿ ಬಿದ್ದಿದ್ದರಿಂದ ಕೇಬಲ್ ನಲ್ಲಿ ವಿದ್ಯುತ್ ಹರಿದಿದೆ. ಈ ಹಿನ್ನಲೆಯಲ್ಲಿ ಅವಘಡ ಸಂಭವಿಸಿದೆ. ಮನೆಗೆ ಕೇಬಲ್ ಹಾಕಿದ ಆಪರೇಟರ್ ವಿರುದ್ದ ಮೃತ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದ ಮೂರು ವರ್ಷದ ಬಾಲಕಿಯನ್ನ ಇಂಚರ ಎಂದು ಗುರುತಿಸಲಾಗಿದೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.