Headlines

ಹೈಕೋರ್ಟ್ ನ್ಯಾಯವಾದಿ ಕೆ ದಿವಾಕರ್ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ :

ಹೈಕೋರ್ಟ್ ನ್ಯಾಯವಾದಿ ಸಾಗರದ ಕೆ. ದಿವಾಕರ್ ಅವರು ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರಿದ್ದಾರೆ. 

ದಿವಾಕರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾನೂನು ಸಲಹೆಗಾರರಾಗಿದ್ದರು ಹಾಗೂ ಪ್ರಸ್ತುತ ಕೆಪಿಸಿಸಿ ವಕ್ತಾರರೂ ಆಗಿದ್ದರು.ಮುಂದಿನ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಕೆ ದಿವಾಕರ್ ಸ್ಪರ್ಧಿಸುವ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ‌.


ಈ ಬಗ್ಗೆ ಆಮ್ ಆದ್ಮಿ ಪಕ್ಷದ  ಸಂಚಾಲಕ ಅಮೃತರಾಜ್ ಮಾತನಾಡಿ ಪ್ರಸ್ತುತ ರಾಜಕೀಯದ ಕೋಮುವಾದ ರಾಜಕಾರಣಕ್ಕೆ ಬೇಸತ್ತು ಆಮ್ ಆದ್ಮಿ ಪಾರ್ಟಿಯ ಸಿದ್ಧಾಂತಗಳನ್ನು ಮೆಚ್ಚಿಕೊಂಡು ಆಪ್ ಗೆ ಇಂದು ಸಂಜೆ ಸೇರಿದ್ದಾರೆ ಎಂದರು.  ಕೆ ದಿವಾಕರ್ ಅವರು ಸಾಗರ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಆಮ್ ಆದ್ಮಿ ಪಾರ್ಟಿ ಸಂಘಟಿತವಾಗುತ್ತಿದೆ ಮುಂದಿನ ದಿನಗಳಲ್ಲಿ ಸಾಗರ ವಿಧಾನಸಭಾ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದರು.


ಸ್ವಾಗತ ಕೋರಿದ ಹೊಸನಗರ ತಾಲೂಕ್ ಆಮ್ ಆದ್ಮಿ ಘಟಕ

ಇಂದು ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕೆ ದಿವಾಕರ್ ರವರಿಗೆ ಹೊಸನಗರ ತಾಲೂಕ್ ಆಮ್ ಆದ್ಮಿ ಘಟಕದ ಅಧ್ಯಕ್ಷರಾದ  ಗಣೇಶ್ ಸೂಗೋಡು, ಉಪಾಧಕ್ಷರಾದ ಹಸನಬ್ಬ ಹಾಗೂ ಈಶ್ವರಪ್ಪ ಗೌಡ, ಮಹಮ್ಮದ್ ಹನೀಫ಼್ ಮತ್ತು ನಾಸೀರ್ ರವರು ಸ್ವಾಗತ ಕೋರಿದ್ದಾರೆ.

Leave a Reply

Your email address will not be published. Required fields are marked *