ಸಾಗರದ ಯುವ ಉದ್ಯಮಿ ರಾಯಲ್ ಬಿಲ್ಡರ್ಸ್ ಮಾಲೀಕ ಮಹೇಶ್ ಮೇಲೆ ರಾಜಕೀಯ ದುರುದ್ದೇಶದಿಂದ ಮತ್ತು ಶಾಸಕರ ಕುಮ್ಮಕ್ಕಿನಿಂದ ಹಾಗೂ ರೌಡಿಶೀಟರ್ ಅರುಣ್ ಕುಗ್ವೆ ರವರ ದ್ವೇಷದ ಹೇಳಿಕೆಯಿಂದ ವಿನಾಕಾರಣ ಪ್ರಥಮ ವರ್ತಮಾನ ವರದಿಯಲ್ಲಿ ಹೆಸರು ಸೇರ್ಪಡೆ ಮಾಡಿರುತ್ತಾರೆ.ಆದ್ದರಿಂದ ಅವರ ಮೇಲಿನ ಪ್ರಕರಣವನ್ನು ಕೈ ಬಿಡುವಂತೆ ಒತ್ತಾಯಿಸಿ ಸಾಗರ ಗೆಳೆಯರ ಬಳಗದ ವತಿಯಿಂದ ಡಿವೈಎಸ್ಪಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಎಎಸ್ಪಿ ರೋಹನ್ ಜಗದೀಶ್ ರವರಿಗೆ ಮನವಿ ಸಲ್ಲಿಸಿದರು.
ಶನಿವಾರ ರಾತ್ರಿ ನಡೆದ ಘಟನೆಗೂ ರಾಯಲ್ ಬಿಲ್ಡರ್ಸ್ ಮಾಲೀಕ ಮಹೇಶ್ ರವರಿಗೆ ಸಂಬಂಧವಿದೆಯೋ ಇಲ್ಲವೋ ಎಂಬುವುದನ್ನು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಪರಿಶೀಲನೆ ಮಾಡಬೇಕಾಗಿದೆ.
ಅದನ್ನು ಹೊರತುಪಡಿಸಿ ಯಾವುದೋ ಒಬ್ಬ ವ್ಯಕ್ತಿ ಹೇಳಿಕೆ ನೀಡಿದ ಎಂಬ ಮಾತ್ರಕ್ಕೆ ಘಟನೆಗೆ ಸಂಬಂಧವಿಲ್ಲದ ಹಾಗೂ ಘಟನೆಯಲ್ಲಿ ಹಾಜರಿರದ ವ್ಯಕ್ತಿಯ ಹೆಸರನ್ನು ಕೇಸ್ ಗೆ ಸೇರಿಸಿರುವುದು ಕಾನೂನು ಬಾಹಿರ, ಪೊಲೀಸರು ನಿಷ್ಪಕ್ಷಪಾತವಾದ ಕರ್ತವ್ಯ ಮಾಡುವಲ್ಲಿ ಹಾಲಿ ಶಾಸಕರ ಒತ್ತಡಕ್ಕೆ ಮಣಿದು ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ.
ಶಾಸಕರು ತಮ್ಮ ಆಪ್ತ ವಲಯದಲ್ಲಿ ರೌಡಿಶೀಟರ್ ಅರುಣ್ ಕುಗ್ವೆ ಎಂಬ ವ್ಯಕ್ತಿಯನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಹಿಂದೆ ಹಲವಾರು ಹಿಂಸಾತ್ಮಾಕ ಹಲ್ಲೆಯಂತಹ ದೌರ್ಜನ್ಯದ ಕೆಲಸ ಮಾಡುತ್ತಿರುವುದು ತಮ್ಮ ಇಲಾಖೆಯ ಗಮನಕ್ಕೂ ಸಹ ಬಂದಿರುತ್ತದೆ ಆ ಕಾರಣ ಕೂಡಲೇ ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಮಹೇಶ್ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ರಾಯಲ್ ಬಿಲ್ಡರ್ಸ್ ಜಲೀಲ್, ಗಾಳಿಪುರ ಲೊಕೇಶ್,ಶ್ರೀನಗರ ಪಾಪು ದಿನೇಶ್,ಸಂತೋಷ್ ಸದ್ಗುರು,ರವಿ ಕುಗ್ವೆ ,ಸೈಯದ್ ಜಾಕೀರ್,ಅಣ್ಣಪ್ಪ ,ಹಾಗೂ ಎಲ್ ಬಿ ನಗರದ ಯುವಕರು,ಶ್ರೀ ನಗರದ ಯುವಕರು,ಗ್ರಾಮಾಂತರ ಪ್ರದೇಶ ಹಾಗೂ ಪಟ್ಟಣದ ಯುವಕರು ಮತ್ತು ಗೆಳೆಯರ ಬಳಗದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.