Ripponpete | ರಸ್ತೆ ಅಗಲೀಕರಣ ಕಾಮಗಾರಿ – ಶಾಸಕ ಬೇಳೂರು ಗೋಪಾಲಕೃಷ್ಣ ಪರಿಶೀಲನೆ | ಅನಧಿಕೃತ ಕಟ್ಟಡಗಳ ತೆರವಿಗೆ ಸೂಚನೆ
ರಿಪ್ಪನ್‌ಪೇಟೆ : ಪಟ್ಟಣದ 5.13 ಕೋಟಿ ರೂ ವೆಚ್ಚದಲ್ಲಿ ಸಾಗರ – ತೀರ್ಥಹಳ್ಳಿ ರಸ್ತೆಯಲ್ಲಿ ನಡೆಯುತ್ತಿರುವ ದ್ವಿಪಥ ರಸ್ತೆ ಕಾಮಗಾರಿಯನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಪರಿಶೀಲನೆ ನಡೆಸಿದರು.
ಈ ಸಂಧರ್ಭದಲ್ಲಿ ಸಾಗರ ರಸ್ತೆಯಲ್ಲಿ ನಕಾಶೆ ಕಂಡ ರಸ್ತೆಗೆ ವಿದ್ಯುತ್ ಕಂಬ ಅಳವಡಿಸಿರುವ ಬಗ್ಗೆ ಬಡಾವಣೆಯ ನಿವಾಸಿಗಳು ಶಾಸಕರಿಗೆ ಮನವಿ ಸಲ್ಲಿಸಿದರು ಕೂಡಲೇ ಸ್ಥಳಕ್ಕೆ ತೆರಳಿದ ಶಾಸಕರು ನಕಾಶೆ ಕಂಡ ರಸ್ತೆಯಲ್ಲಿ ಅಳವಡಿಸಿರುವ ಕಂಬವನ್ನು ತೆರವುಗೊಳಿಸುವಂತೆ ವಿದ್ಯುತ್ ಗುತ್ತಿಗೆದಾರನಿಗೆ ಸೂಚಿಸಿದರು.
ಸಾಗರ ರಸ್ತೆಯ ಕಟ್ಟಡ ತೆರವುಗೊಳಿಸದೇ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡದ ಮಾಲೀಕರಿಗೆ ಊರಿನ ಅಭಿವೃದ್ಧಿ ದೃಷ್ಟಿಯಿಂದ ಕಟ್ಟಡವನ್ನು ಕೂಡಲೇ ತೆರವುಗೊಳಿಸಿ ಕೊಡುವಂತೆ ಹೇಳಿ ರಸ್ತೆ ಕಾಮಗಾರಿಗೆ ಅಡ್ಡಲಾಗಿರುವ ಯಾವ ಕಟ್ಟಡವನ್ನು ಉಳಿಸುವುದಿಲ್ಲ ಎಲ್ಲಾವನ್ನು ಚುನಾವಣೆ ನೀತಿ ಸಂಹಿತೆಯ ನಂತರ ಖುದ್ದು ಹಾಜರಿದ್ದು ತೆರವುಗೊಳಿಸುತ್ತೇನೆ ಎಂದರು.
ಕಳೆದ ಹಲವಾರು ವರ್ಷಗಳಿಂದ ಬೇಡಿಕೆಯಿದ್ದ ರಸ್ತೆಗೆ ಕಾಯಕಲ್ಪ ಕಲ್ಪಿಸಲು 5.13 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಯನ್ನು ಕೈಗೆತ್ತಿಕೊಳ್ಳಲಾಗಿದೆ, ಕೆಲವೊಂದು ಮಾದ್ಯಮಗಳು ರಸ್ತೆ ಕಾಮಗಾರಿಗೆ ಮಾಜಿ ಶಾಸಕ ಹರತಾಳು ಹಾಲಪ್ಪ ಹಣ ಬಿಡುಗಡೆಗೊಳಿಸಿದ್ದಾರೆ ಎಂದು ಹೇಳುತಿದ್ದು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಅವರು ವಿಧಾನಸಭೆ ಚುನಾವಣೆಗಾಗಿ ರಸ್ತೆ ಉದ್ಘಾಟನೆ ಮಾಡಿದರೇ ಹೊರತು ಹಣ ಬಿಡುಗಡೆಗೊಳಿಸುವ ಗೋಜಿಗೆ ಹೋಗಿರಲಿಲ್ಲ , ಹಾಗಾಗಿ ಕಾಮಗಾರಿ ವಿಳಂಬವಾಯಿತು ನಮ್ಮ ಸರ್ಕಾರದಿಂದ ನಾನು ವಿಶೇಷ ಆಸಕ್ತಿಯಿಂದ ಹಣ ಬಿಡುಗಡೆಗೊಳಿಸಿದ್ದೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ ಗೌಡ , ಮುಖಂಡರಾದ ರವೀಂದ್ರ ಕೆರೆಹಳ್ಳಿ , ಮಾಸ್ತಿಕಟ್ಟೆ ಸುಬ್ರಹ್ಮಣ್ಯ ,ಗಣಪತಿ ಗವಟೂರು, ಈಶ್ವರಪ್ಪ ಗೌಡ , ರಮೇಶ್ ಫಾನ್ಸಿ ,ಶ್ರೀನಿವಾಸ್ ಆಚಾರ್,ನವೀನ್ ಕೆರೆಹಳ್ಳಿ, ಶ್ರೀಧರ್ ಹಾಗೂ ಇನ್ನಿತರರಿದ್ದರು.