Anandapura | ನಕಲಿ ಬಂಗಾರ ಕೊಟ್ಟು ವೃದ್ದೆಯ ಓಲೆ ಕಳ್ಳತನಗೈದಿದ್ದ ಪಾಲಿಶ್ ಗ್ಯಾಂಗ್ ಅರೆಸ್ಟ್ | ಆನಂದಪುರ ಪೊಲೀಸರ ಭರ್ಜರಿ ಬೇಟೆ
ಬಂಗಾರ ಪಾಲಿಶ್ ಹಾಕಿಕೊಡುತ್ತೇವೆ ಎಂದು ಮಹಿಳೆಯರನ್ನು ಯಾಮಾರಿಸುವ ಗ್ಯಾಂಗ್‌ವೊಂದನ್ನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕುತೂಹಲ ಮೂಡಿಸಿದ ಪ್ರಕರಣದಲ್ಲಿ ಅಜ್ಜಿಗೆ ನಕಲಿ ಚಿನ್ನದ ನಾಣ್ಯಕೊಟ್ಟು ಆಕೆಯ ಬೆಂಡೋಲೆಯನ್ನು ಪಾಲೀಶ್ ನೆಪದಲ್ಲಿ ಕದ್ದೊಯ್ದಿದ್ದ ಆರೋಪದ ಅಡಿಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ.
ನಡೆದಿದ್ದೇನು..???
ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ ಕೆಲವು ತಿಂಗಳಗಳ ಹಿಂದೆ ಹೊಸಂತೆ ಗ್ರಾಮದ ಬಸಮ್ಮ ಎಂಬ ಮಹಿಳೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದಾಗ ಅವರನ್ನು ಮುಖಾಮುಖಿಯಾಗಿ ಬೇಟಿಯಾದ ವ್ಯಕ್ತಿಯೊಬ್ಬ ಏನು.?? ಕಿವಿಯ ಓಲೆ ಹಳೆದಾಗಿ ಹೋಗಿದೆ. ಕೊಡಿ ಪಾಲಿಶ್ ಮಾಡಿಕೊಡುತ್ತೇನೆ ಎಂದಿದ್ದಾನೆ. ಅಲ್ಲದೆ ಪಾಲಿಶ್ ಮಾಡಿ ಕೊಡುವರೆಗೂ ಈ ಈ ಎರಡು ಬಂಗಾರದ ಪದಕಗಳನ್ನು ಇಟ್ಕೊಂಡಿರಿ ಎಂದಿದ್ದಾನೆ.
ಚಿನ್ನದ ಪದಕದ ಮಾತನ್ನ ನಂಬಿದ ಅಜ್ಜಿ ಓಲೆ ಬಿಚ್ಚಿ ಆತನ ಕೈಗೆ ಕೊಟ್ಟಿದ್ದಾಳೆ. ಆತ ಅದನ್ನು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ. ಪುಣ್ಯಾತ್ಮ ವಾಪಸ್ ಬರದಿರುವುದನ್ನು ನೋಡಿ ಅಜ್ಜಿ ಅಲ್ಲಿಯೇ ಇದ್ದ ಅಂಗಡಿಯೊಂದರಲ್ಲಿ ಪದಕಗಳನ್ನ ಪರೀಕ್ಷೆ ಮಾಡಿಸಿದ್ದಾಳೆ.
ಆಗ ಅವರಿಗೆ ಆಘಾತ ಎದುರಾಗಿತ್ತು. ದಾರಿಹೋಕ ಕೊಟ್ಟ ಪದಕ ನಕಲಿಯಾಗಿತ್ತು. ಹೀಗಾಗಿ ಬಸಮ್ಮ ಆನಂದಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.
ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಶಿಕಾರಿಪುರ ಗ್ರಾಮದ ಕೃಷ್ಣಪ್ಪ (65) ಹಾಗೂ ವೀರೇಶ್ (32) ಎಂಬಿಬ್ಬರನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ಅಜ್ಜಿ ಓಲೆಯನ್ನ ವಶಕ್ಕೆ ಪಡೆದು ತನಿಖೆ ನಡೆಸ್ತಿದ್ದಾರೆ.