ರಿಪ್ಪನ್‌ಪೇಟೆ : ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ರವರಿಗೆ ಹಿಂದೂಪರ ಸಂಘಟನೆಗಳಿಂದ ಶ್ರದ್ದಾಂಜಲಿ

ರಿಪ್ಪನ್ ಪೇಟೆ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ಸಂಜೆ ಬಿಜೆಪಿ ಯುವ ಮೋರ್ಚಾ ಧುರೀಣ ಪ್ರವೀಣ್‌ ನೆಟ್ಟಾರು ಅವರನ್ನು ಅಮಾನುಷವಾಗಿ ಹತ್ಯೆಗೈದ ಘಟನೆಯನ್ನು ಖಂಡಿಸಿ ರಿಪ್ಪನ್‌ಪೇಟೆಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೇಣದ ಬತ್ತಿ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಿದರು.


ಪಟ್ಟಣದಲ್ಲಿ ಇಂದು ಹಿಂದೂಪರ ಸಂಘಟನೆಗಳ ವತಿಯಿಂದ ವಿನಾಯಕ ವೃತ್ತದಲ್ಲಿ ಮೊಂಬತ್ತಿ ಹಚ್ಚಿ,2ನಿಮಿಷ ಮೌನಾಚರಣೆ ನಡೆಸಿ ಬಳಿಕ ಪ್ರವೀಣ್ ನೆಟ್ಟಾರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಮುಖಂಡರಾದ ಆರ್ ಟಿ ಗೋಪಾಲ್ ಬಿಜೆಪಿ ಯುವ ಮೋರ್ಚಾದ ಧುರೀಣ ಪ್ರವೀಣ್ ನೆಟ್ಟಾರು ರವರನ್ನು ಬರ್ಬರವಾಗಿ ಹತ್ಯೆಗೈದಿರುವು ಖಂಡನೀಯ,ಈ ದೇಶದಲ್ಲಿ ಹಿಂದೂಗಳು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಿಲ್ಲದಂತಹ ವಾತಾವರಣವನ್ನು ಮುಸ್ಲಿಂ ಗೂಂಡಾಗಳು ನಿರ್ಮಿಸಿದ್ದಾರೆ.ನಮಗಿರುವ ಒಂದೇ ದೇಶದಲ್ಲಿ ನಾವೇ ಜಾಗೃತರಾಗುವಂತಹ ವಾತಾವರಣವನ್ನು ಉದ್ಬವಿಸಿದ್ದಾರೆ. ಮುಸ್ಲಿಮರು ದ್ವೇಷದ ಪ್ರತೀಕಾರ ಇಟ್ಟುಕೊಂಡು ದೇಶದ ಹಿಂದೂಗಳ ಮೇಲೆ ಸೆಡ್ಡು ಹೊಡೆಯುತ್ತಿದ್ದಾರೆ.ಸಮನ್ವಯ ಸಹಬಾಳ್ವೆಯಲ್ಲಿ ಬದುಕುವಂತಹ ಹಿಂದೂಗಳನ್ನು ರೊಚ್ಚಿಗೆಬ್ಬಿಸುವಂತಹ ಕೆಲಸ ಮುಸ್ಲಿಮ್ ದುಷ್ಕರ್ಮಿಗಳು ನಡೆಸುತ್ತಿದ್ದಾರೆ 


ನಮ್ಮದೇ ಬಿಜೆಪಿ ಸರ್ಕಾರವಿದ್ದರು ಹಿಂದೂಗಳ ನೆರವಿಗೆ ಬರುತ್ತಿಲ್ಲ,ಹಿಂದೂ ಕಾರ್ಯಕರ್ತ ಸತ್ತಮೇಲೆ ಐವತ್ತು ಲಕ್ಷ ಹಣ ಕೊಟ್ಟರೆ ಏನು ಪ್ರಯೋಜನ, ಈ ದೇಶದ ಸಂವಿಧಾನವನ್ನು ತಲೆಕೆಳಗೆ ಮಾಡುವ ಹುನ್ನಾರ ಮುಸ್ಲಿಂ ಗೂಂಡಾಗಳಿಂದ ನಡೆಯುತ್ತಿದೆ.ರಾಜಕಾರಣಿಗಳಿಂದ ಕೇವಲ ಸಮಾಧಾನದ ಮಾತನ್ನು ಕೇಳುತ್ತಿದ್ದೇವೆ ನಮಗೆ ತಾತ್ಕಾಲಿಕ ಪರಿಹಾರ ಬೇಕಿಲ್ಲ ಶಾಶ್ವತ ಪರಿಹಾರ ದೊರಕಿಸಿಕೊಡುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು,ಈ ಕೂಡಲೇ ಎಸ್ಡಿಪಿಐ ಪಿಎಫ್ಐ ಸಂಘಟನೆಯನ್ನು  ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.



ನಂತರ ಮಾತನಾಡಿದ ಮುಖಂಡರಾದ ಎಂ ಬಿ ಮಂಜುನಾಥ್ ದಕ್ಷಿಣ ಕನ್ನಡ  ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದ  ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ. ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಹೇಳಿದರು 


ನಂತರ ಮಾತನಾಡಿದ ಹಿಂದೂಪರ ಮುಖಂಡರ ಕಗ್ಗಲಿ ಲಿಂಗಪ್ಪ ಪಕ್ಷಕ್ಕೆ ಹಾಗೂ ದೇಶಕ್ಕಾಗಿ ಜೀವ ಮುಡಿಪಾಗಿಟ್ಟಂತಹ ಪ್ರವೀಣ್ ರವರ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದೇವೆ.ಈ ದೇಶಕ್ಕೆ ಅವರ ಅಗತ್ಯ ತುಂಬಾ ಇತ್ತು ,ಬಿಜೆಪಿ ಪಕ್ಷ ಕೇವಲ ಕಾರ್ಯಕರ್ತರನ್ನು ಬೆಳೆಸುವುದಲ್ಲದೆ ಅವರನ್ನು ಉಳಿಸಿಕೊಳ್ಳುವಂತಹ  ಕೆಲಸ ಮಾಡಬೇಕು ಎಂದರು.


ಈ ಸಂದರ್ಭದಲ್ಲಿ ಹಿಂದೂಪರ ಮುಖಂಡರುಗಳಾದ ಸುಧೀಂದ್ರ ಪೂಜಾರಿ, ಸುರೇಶ್ ಸಿಂಗ್ ,ವೈ ಜೆ ಕೃಷ್ಣ ,ಗಣೇಶ್ ಕಾಮತ್,
ದೇವರಾಜ್ ಕೆರೆಹಳ್ಳಿ ,ಎನ್ ಸತೀಶ್ ,ಸುಂದರೇಶ್,ನಿರೂಪ್ ಕುಮಾರ್ , ವಾಸು ಶೆಟ್ಟಿ, ಸುಧೀರ್ ಪಿ,ಈಶ್ವರ್ ಶೆಟ್ಟಿ  ಸೇರಿದಂತೆ ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *