ಕಾಶ್ಮೀರಿ‌ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುತ್ತಾರೆ – ರಾಷ್ಟ್ರ ಧ್ವಜಕ್ಕೆ ಹಣ ಪಡೆಯುತ್ತಾರೆ -ಮಧು ಬಂಗಾರಪ್ಪ

ಶಿವಮೊಗ್ಗ : ಸೊರಬದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ  ಪ್ರತಿ ಜಿಲ್ಲೆಯಲ್ಲಿ 75 ಕಿ ಮೀ ದೂರ ಕ್ರಮಿಸಬೇಕಿದ್ದು ನಾಳೆ ಸೊರಬ ಪಟ್ಟಣದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಮಧುಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಸಂವಿಧಾನವನ್ನ ತಿದ್ದುಪಡಿ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದಾರೆ. ಧ್ವಜದ ಬಗ್ಗೆ ಮಾತನಾಡುತ್ತಾರೆ. 150 ಕೋಟಿ ವೆಚ್ಚದಲ್ಲಿ ಧ್ವಜ ಹಂಚಲಾಗುತ್ತಿದೆ. ಧ್ವಜ ಹಂಚುವ ಶಕ್ತಿ ನೀಡಿದ್ದು ಮಹಾತ್ಮ ಗಾಂಧಿಯವರ ಕೊಡುಗೆ ಎಂದು ಗುಡುಗಿದರು. ಕಾಶ್ಮೀರಿ‌ಫೈಲ್ಸ್ ಸಿನಿಮಾಗೆ ತೆರಿಗೆ ಪಡೆಯುತ್ತಾರೆ. ಆದರೆ ಧ್ವಜಕ್ಕೆ ಹಣ ಪಡೆಯುತ್ತಾರೆ. ಇದೇ ಬಿಜೆಪಿಯ ಅಮೃತ ಮಹೋತ್ಸವ ಎಂದು ಕುಟುಕಿದರು.

ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದೆ‌. ಇಂದು ಬಿಜೆಪಿ ಮುಕ್ತ ರಾಜ್ಯ ಮಾಡುವ ಅವಶ್ಯಕತೆ‌ ಇದೆ. ಅದಕ್ಕಾಗಿ ಹೋರಾಟ ಮಾಡಬೇಕಿದೆ. ಮನೆ ಬಿದ್ದವರಿಗೆ ಪರಿಹಾರ ನೀಡಲು ಅಧಿಕಾರಿಗಳು ಹಿಂದೆ ಮುಂದೆ ಮಾಡ್ತಾ ಇದ್ದಾರೆ. ಸರ್ಕಾರಕ್ಕೆ ಅಧಿಕಾರಿಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದೆ. ಐದು ಲಕ್ಷ‌ ರೂ ಪರಿಹಾರ ನೀಡಬೇಕು ಮತ್ತು ಓಡಾಡಬೇಕಾದ ಹಿನ್ನಲೆಯಲ್ಲಿ ಅಧಿಕಾರಿಗಳು ನಿವಾಸಿಗಳೆ ಮನೆ ಕೆಡವಿಕೊಂಡಿದ್ದಾರೆ ಎಂದು ಹೇಳ್ತಿದ್ದಾರೆ. ಇದೆಲ್ಲ ಸರಿಯಾಗಬೇಕಿದೆ ಎಂದರು.

ಇನ್ನು ಪರ್ಸೆಂಟೇಜ್ ವಿಷಯ ಮಾತನಾಡಿ ಸೊರಬದಲ್ಲೂ ಪರ್ಸೆಂಟೇಜ್ ನಡೆದಿದೆ. ಸಿದ್ದರಾಮಯ್ಯನವರ ಅವರ ಅವಧಿಯಲ್ಲಿ ರಸ್ತೆ ಎಷ್ಟು ಚೆನ್ನಾಗಿತ್ತು. ಇವತ್ತು ಹಾಕಿರುವ ಟಾರ್ ಹಪ್ಪಳ ಬಂದಹಾಗೆ ಬರುತ್ತಿದೆ. ಇದಕ್ಕೆಲ್ಲಾ ಪರ್ಸೆಂಟೇಜ್ ಕಾಮಗಾತಿ ಎಂದು ದೂರಿದರು.

ಸುದ್ದಿಗೋಷ್ಠಿ ಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್, ಮಾಜಿ ಶಾಸಕರಾದ ಕೆ.‌ಬಿ.ಪ್ರಸನ್ನ ಕುಮಾರ್, ಆರ್ ಪ್ರಸನ್ನ ಕುಮಾರ್, ಎನ್ ರಮೇಶ್, ಕುಲಗೋಡು ರತ್ನಾಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *