Headlines

ರಿಪ್ಪನ್‌ಪೇಟೆ ಮೂಲದ ಟೆಂಪಲ್ ಆಫ್ ಸಕ್ಸಸ್ ನ ಶ್ರೀ ರಘುನಾಥ್ ಗುರೂಜಿ ಇನ್ನಿಲ್ಲ : ರಾಷ್ಟ್ರದ ಪ್ರಮುಖ ಗುರೂಜಿಗಳಲ್ಲಿ ಒಬ್ಬರಾಗಿದ್ದರು.

ರಿಪ್ಪನ್‌ಪೇಟೆ : ಟೆಂಪಲ್ ಆಫ್ ಸಕ್ಸಸ್ ನ ಸಾಯಿದತ್ತ ರಘುನಾಥ್ ಗುರೂಜಿಯವರು ಬೆಂಗಳೂರಿನಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.


ತೀವ್ರ ಅಸೌಖ್ಯ ಗೊಂಡಿದ್ದ ರಘುನಾಥ್ ಗುರೂಜಿ ಅವರು ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರೂಜಿಯವರು ಅಪಾರ ಭಕ್ತವೃಂದವನ್ನು ಹೊಂದಿದ್ದಾರೆ.

ನಿನ್ನೆ (30th August 2022) ವಿಧಿವಶರಾದ ರಘುನಾಥ್ ಗುರೂಜಿ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 2 ರಂದು ಮಣಿಪಾಲದಲ್ಲಿ ನಡೆಯಲಿದೆ.

ಅನುಯಾಯಿಗಳು ಬೆಂಗಳೂರು ಬಸವನಗುಡಿಯ ವಾಣಿ ನಿಲಾಸ ರಸ್ತೆಯಲ್ಲಿರುವ ಟೆಂಪಲ್ ಆಫ್ ಸಕ್ಸಸ್ ಬಳಿ ನಾಳೆ ಗುರುವಾರ (ಸೆಪ್ಟೆಂಬರ್ 1) ರಘುನಾಥ್ ಗುರೂಜಿ ಅವರ ಅಂತಿಮ ದರ್ಶನ ಪಡೆಯಬಹುದು. ಮರು ದಿನ ಸೆಪ್ಟೆಂಬರ್ 2 ರಂದು ಮಣಿಪಾಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಇವರು ಮೂಲತಃ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿಯ ಕೃಷಿಕ ಶಾಮರಾಯರ ಇಬ್ಬರು ಮಕ್ಕಳಲ್ಲಿ ಹಿರಿಯ ಪುತ್ರನಾದ ಇವರು ಜೀವ ವಿಮಾ ನಿಗಮದಲ್ಲಿ ಕ್ಷೇತ್ರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು ನಂತರ ರಿಪ್ಪನ್‌ಪೇಟೆ,ಕೋಣಂದೂರು,ತೀರ್ಥಹಳ್ಳಿ, ಆನಂದಪುರ,ಸಾಗರ ,ಶಿಕಾರಿಪುರ ಸೇರಿದಂತೆ ವಿವಿಧೆಡೆಯಲ್ಲಿ ಶಾಂಭವಿ‌ ಪೈನಾನ್ಸ್ ಎಂಬ ಹಣಕಾಸು ಸಂಸ್ಥೆ ಯನ್ನು ತೆರೆದು ಸಾಕಷ್ಟು ಶಿಕ್ಷಣವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಿ ಶಾಂಭವಿ ಫೈನಾನ್ಸ್ ರಘುನಾಥ್ ಶೆಣೈ ಎಂದು ಕೀರ್ತಿ ಗಳಿಸಿದ್ದರು.

ರಾಜಕಾರಣಿಗಳಿಗೆ ಮೆಚ್ಚಿನ ಗುರುವಾಗಿದ್ದರು : 

ರಾಜ್ಯದ ಹಾಗೂ ರಾಷ್ಟ್ರದ ಪ್ರಮುಖ ರಾಜಕಾರಣಿಗಳಿಗೆ ವಾಟರ್ ಥೆರಪಿಯಿಂದ ಅನೇಕ ರೋಗಗಳಿಗೆ ಚಿಕಿತ್ಸೆ  ನೀಡುವುದರ ಮೂಲಕ ಗುಣಮುಖರಾಗಲು  ಕಾರಣಕರ್ತರಾಗಿದ್ದ ಶ್ರೀ ರಘುನಾಥ್ ಗುರೂಜಿ ರಾಜಕಾರಣಿಗಳ ಮೆಚ್ಚಿನ ಗುರೂಜಿಯಾಗಿದ್ದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ರಾವ್ ದೇಶ ಇವರ ಅನುಯಾಯಿ  ಆಗಿದ್ದರು, ರಾಜ್ಯದ ವಿವಿಧ ರಾಷ್ಟ್ರೀಯ ಪಕ್ಷಗಳ ಮುಖಂಡರುಗಳು ಸಿನಿಮಾ ತಾರೆಯರು,ಧಾರವಾಹಿ ನಟನೆಟಿಯರು, ವೈದ್ಯರು ಸೇರಿದಂತೆ   ಸಾವಿರಾರು ಜನರು ಇವರ ಭಕ್ತರಾಗಿದ್ದರು ಹಾಗೆ ಅನುಯಾಯಿಯಾಗಿದ್ದರು.


ಯಶಸ್ಸಿನ ದೇವಾಲಯ: 

ಸಾಯಿ ದತ್ತ ರಘುನಾಥ ಗುರೂಜಿ ಅವರು ಹುಟ್ಟಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿಯಲ್ಲಿ. ಅವರು ಟೆಂಪಲ್ ಆಫ್ ಸಕ್ಸೆಸ್‌ನ ಸಂಸ್ಥಾಪಕರಾಗಿದ್ದಾದ್ದರು. ಹಳೆಯ ಚಿಕಿತ್ಸಾ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಅಮೃತ್ ಚಿಕಿತ್ಸೆ ಎಂಬ ಹಳೆಯ ಪದ್ದತಿಯನ್ನು ಅಳವಡಿಸಿಕೊಂಡಿದ್ದರು. ಅವರ ಯೌವನದಲ್ಲಿ, ಅವರು ನಾಲ್ಕು ಕಾಯಿಲೆಗಳಿಂದ ಬಳಲುತ್ತಿದ್ದರು. 6 ವರ್ಷಗಳ ನೋವು ಮತ್ತು 200 ಕ್ಕೂ ಹೆಚ್ಚು ವೈದ್ಯರು, ಮೆಡಿಸಿನ್‌ಗಳು ಇತ್ಯಾದಿಗಳನ್ನು ಸಮಾಲೋಚಿಸಿದ ನಂತರ ಅವರು ಅಮೃತ್ ಚಿಕಿತ್ಸೆ ಮೂಲಕ ಪರಿಹಾರ ಕಂಡುಕೊಂಡರು.

ಈ ಚಿಕಿತ್ಸೆಯು ನಾಲ್ಕು ತಿಂಗಳೊಳಗೆ ಅವರ ಎಲ್ಲಾ ಕಾಯಿಲೆಗಳನ್ನು ಗುಣಪಡಿಸಿತು. ಶ್ರೀ ಶಿರಡಿ ಸಾಯಿ ಬಾಬಾ ಅವರ ಒಳನೋಟದ ಮೂಲಕ, ಅವರು ಈ ದೈವಿಕ ಚಿಕಿತ್ಸೆಯನ್ನು ಅಗತ್ಯವಿರುವವರಿಗೆ ಹರಡಲು ನಿರ್ಧರಿಸಿದರು. ಅವರು 1999 ರಲ್ಲಿ ಸರಸ್ವತಿ ನಗರದಲ್ಲಿ ಟೆಂಪಲ್ ಆಫ್ ಸಕ್ಸೆಸ್ ಅನ್ನು ಪ್ರಾರಂಭಿಸಿದರು. ಅಂದಿನಿಂದ ಇದು ನಿರ್ಗತಿಕರಿಗೆ ಸಹಾಯ ಮಾಡುವ ಸಂಸ್ಥೆಯಾಗಿ ವಿಕಸನಗೊಂಡಿದೆ.

 

Leave a Reply

Your email address will not be published. Required fields are marked *