Headlines

ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

 ಹಸುವಿಗೆ ನೀರು ಕುಡಿಸಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದಲ್ಲಿ‌ ನಡೆದಿದೆ. ಬೀರನಕೆರೆ ಗ್ರಾಮದ ರವಿ ನಾಯ್ಕ(18) ಮೃತ ಯುವಕ.

ರವಿನಾಯ್ಕ ಭಾನುವಾರ ಮಧ್ಯಾಹ್ನ ಹಸುವಿಗೆ ನೀರು ಕುಡಿಸಲು ಗ್ರಾಮದ ಎಂಪಿಎಂ ಕಟ್ಟೆಯ ಬಳಿ‌ ಹೋದಾಗ, ಹಸು ನೀರಿಗೆ ಇಳಿದಿದೆ. ಈ ವೇಳೆ ಹಸು‌ ನೀರಿನ ಆಳಕ್ಕೆ ಹೋದಾಗ ಹಸುವನ್ನು ಕರೆದುಕೊಂಡು ಬರಲು ಹೋಗಿ ಆತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಹಸು ಮನೆಗೆ ಬಂದಿದೆ. ಆದರೆ ರವಿ ಮನೆಗೆ ಬಾರದೆ ಹೋದಾಗ ಹುಡುಕಿಕೊಂಡು ಹೋದಾಗ ರವಿ‌ ನೀರಿನಲ್ಲಿ‌ ತೇಲುತ್ತಿರುವುದು ಕಂಡು ಬಂದಿದೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *