ಕುತ್ತಿಗೆ ಕತ್ತರಿಸುವ ಸಂಸ್ಕೃತಿ ನಮ್ಮದಲ್ಲ – ಕೊರಳಿಗೆ ಹಾರ ಹಾಕುವುದು ನಮ್ಮ ಭಾರತ ದೇಶದ ಸಂಸ್ಕೃತಿ : ಕಲ್ಲಡ್ಕ ಪ್ರಭಾಕರ್ ಭಟ್ |Ripponpet

ರಿಪ್ಪನ್‌ಪೇಟೆ : ಭಾರತ ದೇಶವನ್ನು ಮುಸಲ್ಮಾನ್, ಕ್ರೀಶ್ಚಿಯನ್ ದೇಶವನ್ನಾಗಿ ಮಾಡಬೇಕು ಎಂಬ ಹಿನ್ನಲೆಯಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಿದರು.ಮತಾಂತರ ಮಾಡುವುದರೊಂದಿಗೆ ಭಯೋತ್ಪದನೆಯನ್ನು ಹುಟ್ಟು ಹಾಕಿ ಹಿಂದು ಧರ್ಮವನ್ನು ಒಡೆಯುವುದರೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ದಕ್ಕೆ ತರುವ ಕಾರ್ಯದಲ್ಲಿ ತೊಡಗಿರುವವರಿಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಸಂಘಟನ್ಮಾಕವಾಗಿ ತಕ್ಕ ಉತ್ತರ ನೀಡುತ್ತದೆಂದು ಕರ್ನಾಟಕ ದಕ್ಷಿಣ ಪ್ರಾಂತ್ ಕಾರ್ಯಕಾರಣಿ ಅಹ್ವಾನಿತ ಸದಸ್ಯ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಎಚ್ಚರಿಸಿದರು.


ರಿಪ್ಪನ್‌ಪೇಟೆಯ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಸಾಗರ ಜಿಲ್ಲಾ ಪ್ರಾಂತ್ಯದ  ರಾಷ್ಟ್ರೀಯ ಸ್ವಯಂ ಸೇವಕರ ಸಂಘದವರು ಅಯೋಜಿಸಲಾದ “ಪ್ರಾಥಮಿಕ ಶಿಕ್ಷಾ ವರ್ಗ-2022’’ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿ ದೇಶದಲ್ಲಿನ ಪ್ರಮುಖ ನಗರಗಳಲ್ಲಿನ ಟಿಪ್ಪು ಹೈದರ್ ನಗರಗಳು ಮಿನಿ ಪಾಕಿಸ್ತಾನಗಳಾಗಿವೆ.ಭಾರತ ದೇಶದಲ್ಲಿ ಹಿಂದೂಗಳು ಹಾರಹಾಕಿ ಸ್ವಾಗಿಸುತ್ತೇವೆ ಹೊರತು ಕುತ್ತಿಗೆ ಮೇಲೆ ಕತ್ತಿ ಇಡುವವರಲ್ಲ.ಜನಸಂಖ್ಯಾ ನಿಯಂತ್ರಣಕ್ಕಾಗಿ ಸರ್ಕಾರ ಹೆಣ್ಣು ಗಂಡಿರಲ್ಲಿ ಮಕ್ಕಳೇರಡೇ ಸಾಕು ಎಂದು ಸರ್ಕಾರ ಘೋಷಣೆ ಮಾಡಿ ನಂತರ ನಾವಿಬ್ಬರು ನಮಗೆ ಇಬ್ಬರು ನಂತರ ಹೆಣ್ಣಿರಲಿ ಗಂಡಿರಲ್ಲಿ ಮಗುವೊಂದು ಸಾಕು ಈಗ ಅದು ಇಲ್ಲದೆ ನಾವಿಬ್ಬರೇ ಸಾಕು ಅನುವಂತಾಗಿರುವ ಭಾರತದೇಶದಲ್ಲಿ ಮುಸಲ್ಮಾನರು ಯಾವುದೇ ಸರ್ಕರದ ನಿಯಮವನ್ನು ಪಾಲಿಸದೆ ಐದಾರು ಜನ ಪತ್ನಿಯರನ್ನು ಹೊಂದಿ ಜನಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿಸುವ ಕಾರ್ಯದೊಂದಿಗೆ ಗುರಿಯನ್ನಾಗಿಸಿಕೊಂಡಿದ್ದಾರೆಂದರು.


ಹಿಂದುಗಳಿಗೆ ಏಕ ಪತ್ನಿ ವ್ರತ ಜಾರಿಗೊಳಿಸಿದ ಹಿಂದಿನ ಸರ್ಕಾರಗಳು ಮುಸ್ಲಿಂರಿಗೆ ಏಕೆ ಹೇಳಲ್ಲಿಲ್ಲ. ಪೋಲಿಯೋ ಮತ್ತು ಕೊರೋನಾ ಲಸಿಕೆ ಹಾಕಿಸಿಕೊಂಡರೇ ಮಕ್ಕಳಾಗುವುದಿಲ್ಲ ಎಂದು ಹೇಳಿ ಲಸಿಕೆ ಹಾಕಿಕೊಳ್ಳಲು ಬಾರದ ಮುಸ್ಲಿಂ ಜನಾಂಗದವರು ಮಕ್ಕಳನ್ನು ಮಾಡುವ ಚಿಂತನೆಯಲ್ಲಿದ್ದಾರೆಂದು ಹೇಳಿ ಮುಸಲ್ಮಾನರಿಗೆ ಕೇಸರಿ ಕಂಡರೆ ತುರುಕಿ ಬಂದವರAತೆ ಮಾಡುತ್ತಾರೆ.ದೇಶ ವಿಭಜನೆ ಮಾಡುವ ಪ್ರಯತ್ನದಿಂದ ನಮ್ಮ ಭಾರತ ದೇಶದ ಧಾರ್ಮಿಕ ನಂಬಿಕೆಗೆ ದಕ್ಕೆ ತರುವ ಕೆಲಸದಲ್ಲಿ ತೊಡಗಿ ಭಾರತ ದೇಶವನ್ನು ಪಾಕಿಸ್ತಾನದ ಮುಸಲ್ಮಾರ ದೇಶವನ್ನಾಗಿ ಮಾಡಲು ಹೊರಟಿರುವವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಘಟನ್ಮಾಕವಾಗಿ ತಕ್ಕ ಉತ್ತರ ನೀಡುತ್ತದೆಂದು ಎಚ್ಚರಿಕೆ ನೀಡಿದರು.

ಆಖಂಡ ಹಿಂದೂಸ್ಥಾನಿಕವನ್ನು ತ್ರಿಖಂಡ ಮಾಡಲು ಬಿಡುವುದಿಲ್ಲ. ಭಯೋತ್ಪಾದನೆ ಹುಟ್ಟುಹಾಕುವ ಕಾರ್ಖಾನೆ ಪಾಕಿಸ್ತಾನವಾಗಿದೆ ಎಂದ ಅವರು ಜಗತ್ತು ಉಳಿಯಬೇಕಾದರೆ ಹಿಂದೂಗಳು ಸಂಘಟನೆಗೊಳ್ಳಬೇಕು.ಜಗತ್ತಿನ ಹಿತಕೋಸ್ಕರ ನಮ್ಮ ಸಂಘಟನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಯುವಜನಾಂಗಕ್ಕೆ ಕರೆ ನೀಡಿದರು.

ಸಾಗರ ಜಿಲ್ಲೆ ಪ್ರಾಂತ್ಯದ ಹೊಸನಗರ ಸಾಗರ ಶಿಕಾರಿಪುರ ಸೊರಬ ತಾಲ್ಲೂಕಿನ ವ್ಯಾಪ್ತಿಯಿಂದ 131 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಸಮೋರೋಪ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಹೊಂಬುಜ ಜೈನ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಮಕ್ಕಳಲ್ಲಿ ರಾಷ್ಟ್ರಭಿಮಾನ.ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಮತ್ತು ವೈಚಾರಿಕವಾಗಿ ಭಾರತ ದೇಶ ಹಿರಿಮೆಯನ್ನು ಹೊಂದಿದೆ.ಭಾರತ ದೇಶದ ಪರಂಪರೆಯಲ್ಲಿ ಧಾರ್ಮಿಕ ಮತ್ತು ಅಧ್ಯಾತ್ಮಿಕ ಭಾವನೆಗಳಿಗೆ ವಿಶೇಷವಾದ ಸ್ತಾನವಿದೆ.ಇದರಿಂದಲೇ ವಿಶ್ವಮಟ್ಟದಲ್ಲಿ ಅಹಿಂಸಾ ತತ್ವ ಭೋದನೆಯ ಮೂಲಕ ಶಾಂತಿ ನೆಮ್ಮದಿ ನೆಲಸಲು ಕಾರಣವಾಗಿದೆ ಎಂದ ಅವರು ದೇಶದ ಪ್ರಾಚೀನ ಇತಿಹಾಸವನ್ನು ನಮ್ಮ ಇಂದಿನ ಯುವ ಪೀಳಿಗಗೆ ಪರಿಚಯಿಸುವ ಕೆಲಸದಲ್ಲಿ ರಾಮಯಾಣ ಮಹಾಭಾರತದ ಕಥೆಗಳಿಂದ ಜನಜಾಗೃತಿ ಮಾಡಬೇಕಾಗಿದೆ  ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ಯಾಮಸುಂದರ್ ವಹಿಸಿದ್ದರು.
ಶ್ರೀಧರ ನಿಸಾರಾಣಿ ಸ್ವಾಗತಿಸಿದರು.ಶಿಬಿರದ ವರದಿಯನ್ನು ಗಣೇಶ್ ಮಂಡಿಸಿದರು.

Leave a Reply

Your email address will not be published. Required fields are marked *