ರಿಪ್ಪನ್ಪೇಟೆ : ಕ್ರಿಶ್ಚಿಯನ್ ಸಮುದಾಯದವರು ಸದಾ ಶಾಂತಿ ಸಹಬಾಳ್ವೆಯೊಂದಿಗೆ ಅರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸರ್ವಧರ್ಮೀಯರಲ್ಲಿ ಸಮಾನತೆ ಸಹೋದರತ್ವವನ್ನು ಕಾಣುವುದರೊಂದಿಗೆ ತಮ್ಮ ಧರ್ಮದ ಸಂಘಟನೆಯನ್ನು ಬೆಳೆಸಿಕೊಂಡವರು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೆಂದ್ರ ಹೇಳಿದರು.
ರಿಪ್ಪನ್ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ನವೀಕರಣಗೊಂಡು ನಾಳೆ ಲೋಕಾರ್ಪಣೆಗೊಳ್ಳಲಿರುವ ಗುಡ್ಶಫರ್ಡ್ ಚರ್ಚ್ ಗೆ ಭೇಟಿ ನೀಡಿ ಧರ್ಮಗುರುಗಳು ಹಾಗೂ ಕ್ರೈಸ್ತ ಬಾಂಧವರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿ ಕ್ರಿಶ್ಚಿಯನ್ ಸಮುದಾಯ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.ಪ್ರತಿ ಕ್ರಿಸ್ಮಸ್ ಹಬ್ಬದಂದು ನನ್ನ ಕ್ಷೇತ್ರವಾದ ತೀರ್ಥಹಳ್ಳಿಯ ಚರ್ಚ್ ಗೆ ಭೇಟಿ ನೀಡಿ ಶುಭಾಶಯ ಕೋರುತ್ತೇನೆ ಎಂದರು.
ತಮ್ಮ ಬಾಲ್ಯದ ಜೀವನದಲ್ಲಿ ವಿದ್ಯಾಬ್ಯಾಸ ಮೊಟಕುಗೊಳಿಸುವಂತಹ ಸಂಧರ್ಭ ಬಂದಾಗ ಧೈರ್ಯ ತುಂಬಿ ಸಹಕಾರ ನೀಡಿದ ಕ್ರಿಶ್ಚಿಯನ್ ಶಿಕ್ಷಕಿಯನ್ನು ಈ ಸಂಧರ್ಭದಲ್ಲಿ ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಗುಡ್ಶಫರ್ಡ್ ಚರ್ಚ್ ಧರ್ಮಗುರು ರೆ.ಪಾ.ಬಿನೋಯಿ ಸಚಿವರನ್ನು ಶಾಲು ಹಾಕಿ ಸನ್ಮಾನಿಸಿದರು.
ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಮುಖಂಡರಾದ ಆರ್.ಟಿ.ಗೋಪಾಲ್, ಎನ್.ಸತೀಶ್, ಪಿ.ರಮೇಶ್, ವನಮಾಲ, ಸುಧೀಂದ್ರ ಪೂಜಾರಿ, ನಿರೂಪ್, ಕಗ್ಗಲಿ ಲಿಂಗಪ್ಪ, ಸೆಬಾಸ್ಟಿಯನ್ ಮ್ಯಾಥ್ಯೂಸ್,ವರ್ಗೀಸ್ ಕೆಂಚನಾಲ, ಜೋಮಿ ಮ್ಯಾಥ್ಯೂಸ್, ಇನ್ನಿತರರು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇