ರಿಪ್ಪನ್‌ಪೇಟೆ : ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 29ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 25 ಮತ್ತು 26 ರಂದು ಭೂಫಾಳಂ ಸಭಾ ಭವನದಲ್ಲಿ ಹಾಗೂ ನವೆಂಬರ್ 27 ರಂದು ಸಂಜೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೇಗೌಡ ಕ್ರೀಡಾಂಗಣದಲ್ಲಿ “ಆಳ್ವಾಸ್ ಸಾಂಸ್ಕೃತಿಕ ವೈಭವ’’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಕಾರ್ಯದರ್ಶಿ ರವಿಚಂದ್ರ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಸಂಚಾಲಕ ಎನ್.ಸತೀಶ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವೆಂಬರ್ 25 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ತಾಯಿ ಭುವನೇಶ್ವರಿ ಅಲಂಕೃತ ಭಾವಚಿತ್ರ ಮೆರವಣಿಗೆ ಶಾಲಾ ಮಕ್ಕಳಿಗಾಗಿ ಭುವನೇಶ್ವರಿ ಹಾಗೂ ವಿವಿಧ ವೇಷ ಭೂಷಣಗಳೊಂದಿಗೆ, ವಿವಿಧ ಜಾನಪದ ಕಲಾತಂಡಗಳ ಭವ್ಯ ಮೆರವಣಿಗೆ ಏರ್ಪಡಿಸಲಾಗಿದೆ.
ನವೆಂಬರ್ 27ರಂದು ನಡೆಯುವ ಆಳ್ವಾಸ್ ಸಾಂಸ್ಕೃತಿಕ ಪ್ರದರ್ಶನದಲ್ಲಿ ಆಂಧ್ರದ ಜನಪದ, ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ಡ್ಯಾನ್ಸ್, ಶಾಸ್ತ್ರೀಯ ನೃತ್ಯ, ನವದುರ್ಗೆ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಧೋಲ್ ಚಲಮ್, ಕಥಕ್ ನೃತ್ಯ, ನವರಂಗ್, ಪಶ್ಚಿಮ ಬಂಗಾಳದ ಪುರಿಲಿಯ ಸಿಂಹ ನೃತ್ಯ ಇನ್ನಿತರ ನೃತ್ಯ ಪ್ರದರ್ಶನಗಳು ಜರುಗಲಿವೆ.
ಈ ಸಾಂಸ್ಕೃತಿಕ ವೈಭವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಕಲ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಸಮಿತಿಯವರಾದ ಗಣೇಶ್ ಕಾಮತ್, ಎಂ.ಬಿ.ಮಂಜುನಾಥ,ಆರ್ ಟಿ ಗೋಪಾಲ್, ಎಂ.ಸುರೇಶ್ ಸಿಂಗ್, ಪದ್ಮಾ ಸುರೇಶ್, ಉಮಾ ಸುರೇಶ್, ಸಿ.ಚಂದ್ರುಬಾಬು, ಸುಧೀರ್ ಪಿ,ಶೈಲ ಆರ್ ಪ್ರಭು, ಸೀತಾ, ಗೀತಾ ಹಾಗೂ ಇನ್ನಿತರ ಹಲವರು ಹಾಜರಿದ್ದರು.
ರಾಜ್ಯೋತ್ಸವ ಕಾರ್ಯಕ್ರಮದ ಸ್ಪರ್ಧೆಯ ವಿವರ :
ನ.25 ರ ಮಧ್ಯಾಹ್ನ 2 ಗಂಟೆಗೆ ಪುರುಷರಿಗಾಗಿ ವಾಲಿಬಾಲ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್ ಮತ್ತು 1-2ನೇ ತರಗತಿ ಮಕ್ಕಳಿಗೆ ನೀತಿ ಕಥೆ ಹೇಳುವ ಸ್ಪರ್ಧೆ, 3-4ನೇ ತರಗತಿ ಮಕ್ಕಳಿಗೆ ಉಕ್ತಲೇಖನ ಸ್ಪರ್ಧೆ, 4-6ನೇ ತರಗತಿಯ ವಿದ್ಯಾರ್ಥಿಗಳಿಗೆ ಮಲೆನಾಡಿನ ಹಳ್ಳಿಯ ಚಿತ್ರಣ, 8-9-10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಜಾನುವಾರು ಸಂತೆ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ನಡೆಯಲಿದೆ.
ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ:
ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದವರು ನವೆಂಬರ್ 25 ರ ಸಂಜೆ ಜಿಲ್ಲಾ ಮಟ್ಟದ 16 ವರ್ಷ ಮೇಲ್ಪಟ್ಟವರಿಗೆ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಜಾನಪದಗೀತೆ ಮತ್ತು ಭಾವಗೀತೆ ಹಾಗೂ ಸಮೂಹ ಕನ್ನಡನಾಡ ಗೀತೆಯ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಭಾಗವಹಿಸಲಿಚ್ಚಿಸುವವರು ನವೆಂಬರ್ 25 ರ ಮಧ್ಯಾಹ್ನ 3 ಗಂಟೆಯ ಒಳಗೆ ಹೆಸರು ನೊಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೊಂದಾಯಿಸಿಕೊಳ್ಳುವವರು 8722242237, 7259619104 ಈ ಮೊಬೈಲ್ ನಂಬರ್‌ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.