ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಕೊಪ್ಪ ಮತ್ತು ಮಾಣಿಕೆರೆ ಮಸರೂರು ಸಂಪರ್ಕದ 60 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಹಾಲಪ್ಪ ಹರತಾಳು ಚಾಲನೆ ನೀಡಿದರು.
ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ಹಳ್ಳಿ ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ದಿ ಸಾಧ್ಯವಾಗಿದ್ದು ಮೊದಲ ಆಧ್ಯತೆಯಾಗಿ ಗ್ರಾಮಗಳ ಅಭಿವೃದ್ದಿಗೆ ರಾಜ್ಯ ಮತ್ತು ಕೇಂದ್ರ ಸರ್ಕರ ಹೆಚ್ಚು ಒತ್ತು ನೀಡಿವೆ.
ಬಹುದಿನಗಳ ಬೇಡಿಕೆಯನ್ನಾದರಿಸಿ ಅಧ್ಯತೆಯ ಮೇಲೆ ಕ್ಷೇತ್ರದ ಕೆರೆಹಳ್ಳಿ ಹೋಬಳಿಯ ಮಸರೂರು, ಮಾಣಿಕೆರೆ ಮತ್ತು ಹೊನ್ನಕೊಪ್ಪ, ಕೆಂಚನಾಲ ಸಂಪರ್ಕ ರಸ್ತೆಗೆ ಸರ್ಕಾರದಿಂದ ವಿಶೇಷ ಅನುದಾನದಡಿಯಲ್ಲಿ ಹಣ ಬಿಡುಗಡೆಗೊಳಿಸಲಾಗಿ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸುತ್ತಿದ್ದು ಗ್ರಾಮಸ್ಥರು ತಮ್ಮೂರಿನ ರಸ್ತೆ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡಿಕೊಳ್ಳುವುದರೊಂದಿಗೆ ಸಿಮೆಂಟ್ ರಸ್ತೆಗೆ ನೀರು ಉಣಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಹಾಲಪ್ಪ ಹರತಾಳುರವರನ್ನು ಗ್ರಾಮಸ್ಥರು ಶಾಲು ಹಾಕಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅರಸಾಳು ಗ್ರಾ.ಪಂ ಅಧ್ಯಕ್ಷ ಕೆ.ಉಮೇಶ್, ಕೆಂಚನಾಲ ಗ್ರಾಮ ಪಂಚಾಯ್ತಿ ಸದಸ್ಯ ಗೌರಮ್ಮ, ಮಹೇಶ್, ಪರಮೇಶ್ ಹೊನ್ನಕೊಪ್ಪ, ಅರುಣ್‌ಕುಮಾರ್, ದೇವರಾಜ್, ಸುಶೀಲಮ್ಮ, ಶ್ರೀಮಂತ ಹಾಗೂ ಪಕ್ಷದ ಮುಖಂಡರಾದ ಮೆಣಸೆ ಆನಂದ, ಎ.ಟಿ.ನಾಗರತ್ನ, ರಾಮಚಂದ್ರ ಹರತಾಳು, ನಾಗಾರ್ಜುನಸ್ವಾಮಿ, ಅರವಿಂದ, ದೇವೇಂದ್ರಪ್ಪಗೌಡ ನೆವಟೂರು, ಸುಂದರೇಶ್, ಜಿ.ಪಂ.ಇ.ಉ.ವಿ.ಇಂಜಿನಿಯರ್ ಶಿವಮೂರ್ತಿ, ಆರ್.ಎಫ್.ಓ. ಬಾಬುರಾಜೇಂದ್ರ ಪ್ರಸಾದ್, ದೊಡ್ಡೆಗೌಡ ಅರಸಾಳು, ಮಧುಕರ, ಮುರುಗೇಶ್‌ಗೌಡರು ಮಸರೂರು, ಬಾಷಾ ಸಾಬ್ ಇನ್ನಿತರ ಹಲವರು ಪಾಲ್ಗೊಂಡಿದ್ದರು.