Headlines

ಆಸ್ತಿಗಾಗಿ ಅಣ್ಣನಿಂದ ತಮ್ಮನ ಕೊಲೆ : ಕ್ಲಿಷ್ಟಕರ ಪ್ರಕರಣ ಬೇಧಿಸಿದ ಪೊಲೀಸರು- ಆರೋಪಿ ಬಂಧನ|crime

ಆಸ್ತಿಗಾಗಿ ಸ್ವಂತ ತಮ್ಮನನ್ನು ಕೊಂದು ಪೊದೆಯಲ್ಲಿ ಬಿಸಾಡಿದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಆನವಟ್ಟಿ ತಾಲೂಕಿನ ತುಡಿ ನೀರು ಗ್ರಾಮದ ನಿವಾಸಿ ಸಲೀಂ ಎಂಬ ಯುವಕ ಡಿಸೆಂಬರ್ 15ರಂದು ರಾತ್ರಿ ಜಮೀನಿಗೆ ಮಲಗಲು ಹೋಗಿದ್ದರು. ಆದರೆ ಆನಂತರ ಮನೆಗೆ ಆತ ವಾಪಸ್ ಹಿಂದಿರುಗಿರಲಿಲ್ಲ ಆತನಿಗಾಗಿ ಎಲ್ಲೆಡೆ ಹುಡುಕಾಟ ಕೂಡ ನಡೆದಿತ್ತು ಬಳಿಕ ಡಿಸೆಂಬರ್ 18ರಂದು ಬೆಳಗ್ಗೆ ಅದೇ ಗ್ರಾಮದ ಹಳ್ಳ ಒಂದರ ಪಕ್ಕದ ಪೊದೆಯಲ್ಲಿ ಸಲೀ0 ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಸಹೋದರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು.




ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಇದನ್ನು ಪತ್ತೆ ಹಚ್ಚಿದಾಗ ಈತನ ಸಹೋದರನೇ ಈತನನ್ನು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ : 

ಆರೋಪಿ ರಫೀಕ್ ಮೃತ ಸಲೀಮನ ಅಣ್ಣನಾಗಿದ್ದು ಇವರಿಬ್ಬರ ನಡುವೆ ಜಮೀನಿನ ವಿಚಾರವಾಗಿ ಆಗಾಗ ಜಗಳವಾಗುತ್ತದೆ ಅಲ್ಲದೆ ರಫೀಕ್ ನ ಹೆಂಡತಿಯ ಜೊತೆ ಸಲೀಂ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನಂತೆ ಇದರಿಂದ ರಫೀಕ್ ತಮ್ಮ ತಮ್ಮನನ್ನು ಮುಗಿಸುವ ಯೋಚನೆ ಕೂಡ ಮಾಡಿದ್ದ ನಂತರ ಸಂತೋಷ್ ಎನ್ನುವ ವ್ಯಕ್ತಿಯ ಸಹಾಯ ಪಡೆದು ಜಮೀನಿನಲ್ಲಿ ಮಲಗಿದ್ದ ಸಲೀಂ ತಲೆ ಮೇಲೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಬಳಿಕ ಆತನ ಶವವನ್ನು ಸಮೀಪದಲ್ಲಿ ಹರಿಯುವ ಬದನೆಕಟ್ಟೆ ಹಳ್ಳಕ್ಕೆ ಎಸೆದಿದ್ದಾರೆ.




ಪ್ರಕರಣದ ತನಿಖೆ ಸಂಬಂಧ ಶಿವಾನಂದ ಮದರಕಂಡಿ, ಡಿ.ವೈ.ಎಸ್.ಪಿ ಶಿಕಾರಿಪುರ ಉಪವಿಭಾಗ ಮತ್ತು  ರಾಜಶೇಖರ್ ಸಿಪಿಐ ಸೊರಬ ವೃತ್ತ ರವರ ನೇತೃತ್ವದಲ್ಲಿ ರಾಜುರೆಡ್ಡಿ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ತೋಟಪ್ಪ ಮ.ಹೆಚ್.ಸಿ, ಉಷಾ, ಹೆಚ್.ಸಿ ಗಿರೀಶ, ಸಿದ್ದೇಶ, ಸಿಪಿಸಿ ಮಲ್ಲೇಶ, ಮಂಜುನಾಥ, ಭರತ್ ಭೂಷಣ್, ಚಾಲಕರಾದ ಎ.ಆರ್.ಎಸ್.ಐ. ಬಂಗಾರಪ್ಪ, ಎಪಿಸಿ ಕೃಷ್ಣಪ್ಪ ರವರುಗಳನ್ನೊಳಗೊಂಡ ತಂಡ ಪ್ರಕರಣವನ್ನು ಭೇದಿಸಿದ್ದಾರೆ.

ಕೊಲೆಯ ಜಾಡನ್ನು ಹಿಡಿದ ಪೊಲೀಸ್ ತಂಡಕ್ಕೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ರವರು ಅಭಿನಂದಿಸಿದ್ದಾರೆ.



Leave a Reply

Your email address will not be published. Required fields are marked *