w
Headlines
Home » ಹುಂಚ : ಬೈಕ್‌ ನಿಲ್ಲಿಸಿ ಕೆರೆಗೆ ಹಾರಿದ ಯುವಕ – ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಕಾರ್ಯಾಚರಣೆ – ಶವ ಪತ್ತೆ|Crime news

ಹುಂಚ : ಬೈಕ್‌ ನಿಲ್ಲಿಸಿ ಕೆರೆಗೆ ಹಾರಿದ ಯುವಕ – ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಕಾರ್ಯಾಚರಣೆ – ಶವ ಪತ್ತೆ|Crime news

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಮುತ್ತಿನಕೆರೆಯ ಬಳಿ ಯುವಕನೊಬ್ಬ ಬೈಕ್ ನಿಲ್ಲಿಸಿ ಕೆರೆಗೆ ಹಾರಿ ಮೃತಪಟ್ಟಿರುವ ಘಟನೆ ನಡೆದಿದೆ.




ನಿನ್ನೆ ತಡರಾತ್ರಿ ಹುಂಚ ಸಮೀಪದ ಮುತ್ತಿನಕೆರೆ ಬಳಿ ಯುವಕನೊಬ್ಬ ತನ್ನ ಬೈಕ್ ಹಾಗೂ ಪಾದರಕ್ಷೆಗಳನ್ನು ಬಿಟ್ಟು ಕೆರೆಗೆ ಹಾರಿದ ಘಟನೆ ನಡೆದಿತ್ತು ಬೆಳಿಗ್ಗೆ ಬೈಕ್ ಹಾಗೂ ಪಾದರಕ್ಷೆಗಳನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು.




ಕೆರೆಯಲ್ಲಿ ಇಂದು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವ ಪತ್ತೆ ಹಚ್ಚಿದ್ದಾರೆ.

ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಮಂಜುನಾಥ್(33) ಎಂದು ಹೇಳಲಾಗುತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.