Headlines

ಆನಂದಪುರ ಸುತ್ತಮುತ್ತ ಪ್ರತ್ಯೇಕ ಮೂರು ರಸ್ತೆ ಅಪಘಾತ ಪ್ರಕರಣ – ಓರ್ವ ಸಾವು|accident

ಘಟನೆ 1:

ಆನಂದಪುರ ಸಮೀಪ ಕೆ ಎಸ್ಆರ್ ಟಿ ಸಿ ಬಸ್ ಹಾಗೂ ಟೂರಿಸ್ಟ್ ಬಸ್ ನಡುವೆ ಮುಖಾಮುಖಿ ಡಿಕ್ಕಿ…!!!



ಸಾಗರ ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದ ಬಳಿ  ಬೆಳ್ಳಂ ಬೆಳಗ್ಗೆ ಕೆ ಎಸ್ ಆರ್ ಟಿ ಸಿ ಹಾಗೂ ಟೂರಿಸ್ಟ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೆಂಗಳೂರಿನಿಂದ ಪ್ರವಾಸಕ್ಕೆಂದು ಜೋಗ ವೀಕ್ಷಣೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.




ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ಸ್ಥಳಕ್ಕೆ ತತಕ್ಷಣ 112 ಪೊಲೀಸ್ ಸಿಬ್ಬಂದಿಗಳಾದ ಸಂತೋಷ್ ನಾಯಕ್ ಹಾಗೂ ಚರಣ್ ರವರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

ಘಟನೆ 2 :

ಬೈಕ್ ಅಪಘಾತ – ಸವಾರ ಸಾವು


ಸಾಗರ ತಾಲೂಕಿನ ಆನಂದಪುರ ಸಮೀಪದ ಬೈರಾಪುರದ ವೀರನ ಕಣಿವೆ ಹತ್ತಿರ  ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಬೈಕ್ ಚಾಲಕ ದಾನಪ್ಪ  (41) ಸಾವನ್ನಪ್ಪಿದ್ದಾರೆ.
ಬೈರಾಪುರದ ನಿವಾಸಿಯಾಗಿದ್ದ ದಾನಪ್ಪರವರು ವೈಯಕ್ತಿಕ ಕೆಲಸದ ನಿಮಿತ್ತ ಆನಂದಪುರ ಕಡೆ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ದಾನಪ್ಪನವರನ್ನು ಆನಂದಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ನೆನ್ನೆ ರಾತ್ರಿ ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನಂತರ ಮಣಿಪಾಲ್ ಗೆ ಸಾಗಿಸುವ ಮಾರ್ಗ ಮಧ್ಯ  ಇದು ಬೆಳಗಿನ ಜಾವ ಹೆಬ್ರಿಯಲ್ಲಿ ಕೊನೆ ಉಸಿರೆಳೆದಿದ್ದಾರೆ.


ಘಟನೆ 3 :

ಆನಂದಪುರ ಸಮೀಪದ ಮಲಂದೂರಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದ ಬೈಕ್ : 


ಆನಂದಪುರ ಸಮೀಪದ ಮಲಂದೂರಿನಲ್ಲಿ ರಾತ್ರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಘಟನೆ ನೆನ್ನೆ ರಾತ್ರಿ ನಡೆದಿದೆ.

ಆನಂದಪುರದಿಂದ ಸಂತೆ ಮುಗಿಸಿಕೊಂಡು ಹೋಗುತ್ತಿದ್ದ ಶಿಕಾರಿಪುರ ಮೂಲದ ಬೈಕ್ ಚಾಲಕ ಆನಂದಪುರ ಮೂಲದ ಯುವಕರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಅಪಘಾತದಲ್ಲಿ ಮೂವರು ರಸ್ತೆಯಲ್ಲಿ ಬಿದ್ದಿದ್ದಾರೆ. ನಂತರ ಅವರನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.




ಆನಂದಪುರ ಮೂಲದ ಯುವಕನಿಗೆ ತೀವ್ರ ಪ್ರಮಾಣದ ಗಾಯವಾಗಿದ್ದರಿಂದ ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಯಿತು.

Leave a Reply

Your email address will not be published. Required fields are marked *