Headlines

ಸಾಗರದ ಮನೆಯೊಂದರಲ್ಲಿ ಬೆಂಕಿ ಅವಘಡ – ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ|fire

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಎಸ್.ಎನ್. ವೃತ್ತದಲ್ಲಿರುವ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಉಂಟಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಅನಾಹುತ ಸಂಭವಿಸಿದೆ.




ಸಾಗರದ ಮಾರ್ಕೆಟ್ ರಸ್ತೆಯ ಶಿವಪ್ಪ ನಾಯಕ ವೃತ್ತದ ಇರುವ ಮನೆಯಲ್ಲಿ ಈ ಬೆಂಕಿ ಅನಾಹುತವಾಗಿದೆ.


ಮನೆಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ತಕ್ಷಣ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. 

ಮೊದಲ ಮಹಡಿಯಲ್ಲಿ ಇದ್ದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಯುವಕರು ಜೀವದ ಹಂಗು ತೊರೆದು ಮನೆಯೊಳಗೆ ಇದ್ದ ಸಿಲಿಂಡರ್ ಅನ್ನು ಹೊರಕ್ಕೆ ತಂದಿದ್ದಾರೆ. ಆದರೆ ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ.





 ಘಟನಾ ಪ್ರದೇಶದಲ್ಲಿ ಆವರಿಸಿಕೊಂಡ ದಟ್ಟ ಹೊಗೆಯಿಂದಾಗಿ ಸಿಗಂದೂರು ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

ಸಮಯ ಪ್ರಜ್ಞೆ ಮೆರೆದ ಯುವಕರ ತಂಡ

ಇನ್ನು ಬೆಂಕಿಯು ತನ್ನ ಕೆನಾಲಿಗೆಯನ್ನು ವಿಸ್ತರಿಸಿ ದಟ್ಟವಾದ ಹೊಗೆ ಆವರಿಸಿದ ಸಂದರ್ಭ ಮನೆಯೊಳಗಿದ್ದ ಗ್ಯಾಸ್ ಸಿಲಿಂಡರ್ ಪೈಪ್ ಮೆದುವಾಗಿ ಗ್ಯಾಸ್ ಸೋರಿಕೆಯಾಗುವ ಲಕ್ಷಣಗಳು ಕಂಡುಬರುತ್ತಿತ್ತು ಇದನ್ನು ಗಮನಿಸಿದ ಅಲ್ಲಿನ ಯುವಕರು ತಮ್ಮ ಜೀವದ ಹಂಗು ತೊರೆದು ಮನೆಯ ಹಿಂಬದಿಯ ಕಿಟಕಿ ಒಡೆದು ಒಳಗೆ ನುಸುಳಿ ನಡೆಯಬೇಕಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಯುವಕರ ಸಮಯ ಪ್ರಜ್ಞೆಗೆ ಸಾರ್ವಜನಿಕರು ಮುಕ್ತವಾಗಿ ಶ್ಲಾಘಿಸಿದ್ದಾರೆ.


ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಬೇಳೂರು


ಘಟನಾ ಸ್ಥಳಕ್ಕೆ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕರು ಗೋಪಾಲಕೃಷ್ಣ ಬೇಳೂರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಾಜನಂದಿನಿ ಕಾಗೋಡು ರವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ  ಮನೆ ಮಾಲೀಕರ ನೋವಿಗೆ ಸ್ಪಂದಿಸಿದರು.


ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯ ಸೈಯದ್ ಜಾಕೀರ್.ಸಯ್ಯದ್ ಜಹೂರ್. ಮಧುಮಾಲತಿ.ಗಣಪತಿ ಮಂಡಗಳಲೆ. ಸದ್ದಾಂ ದೊಡ್ಮನೆ. ಟೈಲ್ಸ್ ಇಮ್ರಾನ್. ಕೇಶವ.ಶಕಿಬ್.ಅಸದ್ ಹಾಗೂ ಮೊದಲಾದವರು ಇದ್ದರು

Leave a Reply

Your email address will not be published. Required fields are marked *