NEET ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಶಿಡ್ಲಾಪುರದ ಯುವಕ
ಬಡ ಕುಟುಂಬದಲ್ಲಿ ಜನಿಸಿ NEET ಪರೀಕ್ಷೆಯಲ್ಲಿ 720ಕ್ಕೆ 595 ಅಂಕ ಪಡೆಯುವ ಮೂಲಕ ಅದ್ವಿತೀಯ ಸಾಧನೆಗೈದ ರಾಜು ಓಲೇಕಾರ್ ಗೆ ಗ್ರಾಮಸ್ಥರು ಹಾಗೂ ವಿವಿಧ ಪಕ್ಷಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಡ್ಲಾಪುರ್ ಗ್ರಾಮದ ಯುವಕನ ಸಾಧನೆ. NEET ಪರೀಕ್ಷೆಯಲ್ಲಿ 720ಕ್ಕೆ 595 ಅಂಕ ಪಡೆದು ಗ್ರಾಮಕ್ಕೆ ಹಿರಿಮೆಯನ್ನು ತಂದಿದ್ದಾನೆ.
ಯುವಕನಿಗೆ ಶಿಗ್ಗಾವ್ ಮತ್ತು ಸವಣೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಶಶಿಧರ್ ಎಲ್ಲಿಗಾರ ಅವರು ಯುವಕನ ಮನೆಗೆ ತೆರಳಿ ಯುವಕನಿಗೆ ಗೌರವ ದಿಂದ ಸನ್ಮಾನಿಸಿ ಸಿಹಿ ಹಂಚಿದರು.
ನಂತರ ಮಾತನಾಡಿದ ಅವರು ಮಕ್ಕಳಿಗೆ ತನ್ನ ಅಭ್ಯಾಸದ ಕಡೆ ಮತ್ತು ತನ್ನ ಮುಂದಿನ ಜೀವನ,ತಂದೆ ತಾಯಿಯರಿಗೆ ಹೆಮ್ಮೆಯತರುವ ಮಕ್ಕಳಾಗಬೇಕು. ಕನ್ನಡ ಶಾಲೆಯಲ್ಲಿ ಕಲಿತ ರಾಜು ಓಲೆಕಾರ್ ಅವರು ಉದಾಹರಣೆಯಾಗಿದ್ದಾರೆ. ರಾಜು ಓಲೆಕಾರ್ ಬಡತನದಲ್ಲಿ ಓದಿ ಉತ್ತಮ ಸಾಧನೆ ಮಾಡಿದ್ದಾನೆ ಇಂತಹ ಯುವಕರೇ ಎಲ್ಲರಿಗೂ ಸ್ಪೂರ್ತಿಯಾಗಬೇಕು ಎಂದರು.
ರಾಜು ಓಲೆಕಾರ್ ಅವರ ತಾಯಿ ರಂಗವ್ವ ಓಲೇಕಾರ್ ಮಾತನಾಡಿ ನನ್ನ ಮಗನ ಶಿಕ್ಷಣಕ್ಕೆ ಹಣದ ಕೊರತೆಯಾದ ಕಾಲದಲ್ಲಿ ಅವನ ಶಿಕ್ಷಣ ನಿಲ್ಲಿಸಬೇಕೆಂದು ಯೋಚನೆ ಕೂಡ ಮಾಡಿದ್ದೆ. ಆದರೆ ಅವರ ಶಿಕ್ಷಕರು ಹಠ ಹಿಡಿದು ಮನೆಗೆ ಬಂದು ನಿಮ್ಮ ಮಗನ ಶಿಕ್ಷಣದಲ್ಲಿ ಬಹಳಷ್ಟು ಜಾಣ ಇದ್ದಾನೆ ಅವನನ್ನು ಓಧಿಸಿ ಎಂದು ಅಲವತ್ತುಕೊಂಡಿದ್ದರು ಹಾಗಾಗಿ ಸಾಲ ಸೋಲ ಮಾಡಿ ಅವನನ್ನು ಶಾಲೆಗೆ ಕಳುಹಿಸಿದ್ದೆ ಒಂದು ವೇಳೆ ಅವನನ್ನು ಶಾಲೆಗೆ ಕಳುಹಿಸದಿದ್ದರೆ ನನ್ನ ಮಗನ ಜೀವನವನ್ನು ನಾನೆ ಹಾಳು ಮಾಡಿದ ಹಾಗೇ ಆಗುತಿತ್ತು ಎಂದು ಹೇಳಿ
ತಮ್ಮ ಸಂತೋಷದ ಬಾಷ್ಪ ಸುರಿಸಿ ಅಳಲು ತೋಡಿಕೊಂಡರು.
ಈ ಸಂಧರ್ಭದಲ್ಲಿ ಗ್ರಾಮಸ್ಥರು ತಮ್ಮ ಅನಿಸಿಕೆ ಹಂಚಿಕೊಂಡರು.
ವರದಿ : ನಿಂಗರಾಜ್ ಕುಡಲ್
ಹಾವೇರಿ ಜಿಲ್ಲೆ ( ಬಂಕಾಪುರ್ )