ವಿದ್ಯುತ್ ಹೈ ಟೆನ್ಷನ್ ವೈರ್ ಗೆ ತಗುಲಿದ ಅಕ್ರಮವಾಗಿ ನಾಟಾ ಸಾಗಿಸುತ್ತಿದ್ದ ಲಾರಿ – ಲಾರಿ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು – |illegal wood

ತೀರ್ಥಹಳ್ಳಿ : ತಾಲೂಕಿನ ತುದೂರು ಗ್ರಾಮಪಂಚಾಯಿತಿಯ ಹೊಸಕೊಪ್ಪದಿಂದ ಅಕ್ರಮವಾಗಿ ನಾಟ ತುಂಬಿಸಿ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿಯನ್ನು ಕೆರೆಕೊಪ್ಪ ಬಳಿ ತಡೆಹಿಡಿಯಲಾಗಿದೆ. ಮೂರು ಲಕ್ಷಕ್ಕೂ ಅಧಿಕ ಮೊತ್ತದ ಅಕೇಶಿಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು.




KA-41-B 6435 ಸಂಖ್ಯೆಯ ಲಾರಿ ಶುಕ್ರವಾರ ಮದ್ಯ ರಾತ್ರಿಯ ವೇಳೆ ಅಕ್ರಮವಾಗಿ ಅಕೇಶಿಯ ನಾಟವನ್ನು ಸಾಗಿಸಲಾಗುತ್ತಿತ್ತು. ಲಾರಿಯಲ್ಲಿದ್ದ ಅಕೇಶಿಯ ಮರದ ತುಂಡು ವಿದ್ಯುತ್ ಹೈ ಟೆನ್ಷನ್ ವೈರ್ ಗೆ ತಗುಲಿದ್ದು ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳ ಫ್ರಿಡ್ಜ್, ಟಿವಿ, ಯುಪಿಎಸ್ ಸೇರಿ ಹಲವು ಉಪಕರಣ ಹಾಳಾಗಿದೆ. ರಾತ್ರಿಯ ವೇಳೆ ಅಲ್ಲಿನ ಗ್ರಾಮಸ್ಥರು ಲಾರಿಯನ್ನು ಹಿಡಿದು ಪೊಲೀಸರಿಗೆ ಹಾಗೂ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿ ಅಕ್ರಮವಾಗಿ ಸಾಗಿಸುತ್ತಿದ್ದ ನಾಟವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ನಾವು ಸಣ್ಣ ಪುಟ್ಟ ಕಟ್ಟಿಗೆಯನ್ನು ಕಡಿಯಲು ಹೋದರು ಅಧಿಕಾರಿಗಳು ನಮ್ಮ ಮೇಲೆ ದಬ್ಬಾಳಿಕೆ ನೆಡೆಸುತ್ತಾರೆ. ಆದರೆ ಈ ರೀತಿ ಅಕ್ರಮವಾಗಿ ಮರವನ್ನು ಸಾಗಾಟ ಮಾಡಿದರು ಅಲ್ಲಿನ ಫಾರೆಸ್ಟ್ ಆಫೀಸರ್ ನೋಡುವುದಿಲ್ಲ. ಈ ಕಾರಣಕ್ಕೆ ನಮ್ಮ ಮನೆಯಲ್ಲಿ ಹಾಳಾಗಿರುವ ಉಪಕರಣಗಳನ್ನು ಸರಿಪಡಿಸಬೇಕು ಹಾಗೂ ಅಕ್ರಮವಾಗಿ ನಾಟ ಸಾಗಿಸುವಾಗ ಬೆಂಬಲ ಕೊಡುವವರ ಮೇಲೂ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.




ಈ ಸಂದರ್ಭದಲ್ಲಿ ತುದೂರು ಗ್ರಾಮಪಂಚಾಯಿತಿ ಅಧ್ಯಕ್ಷರಾದ ಮಧುರಾಜ್ ಹೆಗಡೆ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಬೇಗುವಳ್ಳಿ ಕವಿರಾಜ್, ಬೇಗುವಳ್ಳಿ ಸದಸ್ಯೆ ಭಾಗ್ಯ ಸೇರಿ ಗ್ರಾಮಸ್ಥರು ಇದ್ದರು.



Leave a Reply

Your email address will not be published. Required fields are marked *