Headlines

OLX ನಲ್ಲಿ ಕಾರು ಖರೀದಿಸಲು ಹೋಗಿ ವಂಚನೆಗೊಳಗಾದ ಬ್ಯಾಂಕ್ ಉದ್ಯೋಗಿ

ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ನಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಬ್ಯಾಂಕ್ ಉದ್ಯೋಗಿಯೊಬ್ಬರು OLX  ನಲ್ಲಿ ಕಾರೊಂದನ್ನ ಖರೀದಿಸಲು ಮುಂದಾಗಿ ಲಕ್ಷಾಂತರ ರೂ ಮೋಸವಾಗಿರುವ ಘಟನೆ ನಡೆದಿದೆ.




 ಕಾರಿನ ಜಾಹಿರಾತು ನೀಡಿದ್ದ ಮಾಲೀಕ ತನ್ನನ್ನ ಆಯುಶ್ ಎಂದು ಪರಿಚಯಸಿಕೊಂಡು ಅಡ್ವಾನ್ಸ್ ಮಾಡಲು ಹೇಳಿದ್ದ. ಅದರಂತೆ ಉದ್ಯೋಗಿ 6 ಸಾವಿರ ರೂಪಾಯಿ ಅಡ್ವಾನ್ಸ್ ಮಾಡಿದ್ದಾರೆ. ಆ ಬಳಿಕ ಆಯುಶ್ ಕಾರ್​ ಡಿಲೇವರಿ ಇವತ್ತೆ ತೆಗೆದುಕೊಳ್ಳಿ ದೆಹಲಿಯ ಪಟೇಲ್​ ನಗರದ ಮೆಟ್ರೋ ಪಿಲ್ಲರ್​ ಬಳಿರುವ ಗ್ಯಾರೇಜಿನಲ್ಲಿ ಕಾರಿದೆ. ಬಾಕಿ ಹಣ ಪಾವತಿಸಿ ಡೆಲಿವರಿ ಪಡೆದುಕೊಳ್ಳಿ ಎಂದಿದ್ದ. 




ಇದನ್ನ ನಂಬಿದ ಉದ್ಯೋಗಿ 3.35 ಲಕ್ಷ ರೂಪಾಯಿ ಬ್ಯಾಂಕ್ ಖಾತೆಗೆ ಹಾಕಿದ್ದಾರೆ. ಬಳಿಕ ದೆಹಲಿಯಲ್ಲಿನ ತಮ್ಮ ಬ್ಯಾಂಕ್ ಸಿಬ್ಬಂದಿಯನ್ನ ಕಾರು ಡೆಲಿವರಿ ಪಡೆದುಕೊಳ್ಳುವಂತೆ ಸೂಚಿಸಿ ಕಳುಹಿಸಿದ್ದರು. ಆದರೆ ಸ್ಥಳಕ್ಕೆ ಹೋದಾಗ ಗ್ಯಾರೇಜಿನವರು ಕಾರು ಡೆಲಿವರಿ ಕೊಡಲು ಒಪ್ಪದೇ, ತಮಗೆ ಹಣ ಬಂದಿಲ್ಲ. ಯಾರಿಗೆ ಹಣ ಕೊಟ್ಟಿದ್ದೀರೋ ಅವರನ್ನ ವಿಚಾರಿಸಿ ಎಂದಿದ್ದಾರೆ. 

ಇದರಿಂದ ಮೋಸ ಹೋಗಿರುವ ಬಗ್ಗೆ ಉದ್ಯೋಗಿಗೆ ಅನುಮಾನ ಬಂದು ತಕ್ಷಣ ಆಯುಶ್​ಗೆ ಕರೆಮಾಡಿದ್ಧಾರೆ. ಆದರೆ ಅಷ್ಟರಲ್ಲಿ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ಧಾನೆ. ಹೀಗಾಗಿ, ತಕ್ಷಣವೇ ಹಣ ಸಂದಾಯವಾದ ಬ್ಯಾಂಕ್ ಖಾತೆಯನ್ನು ಫ್ರೀಜ್​ ಮಾಡಿಸಿ, ಬ್ಯಾಂಕ್ ಉದ್ಯೋಗಿ ಕಂಪ್ಲೇಂಟ್ ದಾಖಲಿಸಿದ್ದಾರೆ. 



Leave a Reply

Your email address will not be published. Required fields are marked *