Headlines

ರಿಪ್ಪನ್‌ಪೇಟೆಯ ಜೆ ಎನ್ ಆರ್ ರೈಸ್ ಮಿಲ್ ಮಾಲೀಕ ಜೆ ಎನ್ ರುದ್ರಪ್ಪಗೌಡ ನಿಧನ|Rpet

ರಿಪ್ಪನ್‌ಪೇಟೆ : ಪಟ್ಟಣದ ಶಿವಮೊಗ್ಗ ರಸ್ತೆಯ ಜೆ ಎನ್ ಆರ್ ರೈಸ್ ಮಿಲ್ ಮಾಲೀಕರಾಗಿದ್ದ ಜೆ ಎನ್ ರುದ್ರಪ್ಪ ಗೌಡರು (93) ತಮ್ಮ ಸ್ವಗೃಹದಲ್ಲಿ ಇಂದು ಬೆಳಿಗ್ಗೆ ವಯೋಸಹಜ ನಿಧನರಾದರು.

ಮೂಲತಃ ಜಂಬಳ್ಳಿ ಮನೆತನದವರಾದ ಜೆ ಎನ್ ರುದ್ರಪ್ಪ ಗೌಡರು ಕಳೆದ 70 ವರ್ಷಗಳ ಹಿಂದೆ ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ಜೆ ಎನ್ ಆರ್  ರೈಸ್ ಮಿಲ್ ಪ್ರಾರಂಭಿಸಿದ್ದರು.

ಮೃತರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರಿದ್ದಾರೆ.

ಮೃತರ ಅಂತ್ಯಕ್ರಿಯೆ ಸ್ವಗ್ರಾಮ ಜಂಬಳ್ಳಿಯಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

ಸಮಾಜ ಸೇವೆ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಮೃತರ ನಿಧನಕ್ಕೆ ಹೊಸನಗರ ವೀರಶೈವ ಲಿಂಗಾಯತ್ ಪರಿಷತ್ , ಪಟ್ಟಣದ ಹಲವಾರು ಸಂಘ ಸಂಸ್ಥೆಗಳು ಮತ್ತು ಮುಖಂಡರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *