ರಿಪ್ಪನ್‌ಪೇಟೆ – ಅಗಲಿದ ಯೋಧ ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಜನಸಾಗರ|Procession – body

ಅಸ್ಸಾಂ ರಾಜ್ಯದ ಮಣಿಪುರದಲ್ಲಿ ಮರಣವನ್ನಪ್ಪಿದ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.




ಇಂದು ಮುಂಜಾನೆ 4 ಗಂಟೆಗೆ ಪಾರ್ಥಿವ ಶರೀರ ಶಬರೀಶನಗರದ ಸ್ವಗೃಹಕ್ಕೆ ಆಗಮಿಸಿದ್ದು,ಯೋಧ ಸಂದೀಪ್ ಅವರ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತು.ಅಲ್ಲಿ ಸೇರಿದ್ದ ಜನರ ಕಣ್ಣುಗಳು ಕೂಡ ತೇವಗೊಂಡವು.


ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.


ಅಲಂಕೃತ ವಾಹನದ ಮೂಲಕ ಶಬರೀಶನಗರದ ಸ್ವಗೃಹದಿಂದ ವಿನಾಯಕ ವೃತ್ತದವರೆಗೂ ಮೆರವಣಿಗೆ ಮೂಲಕ ಕರೆತರಲಾಯಿತು. ಯುವಕರು ಸೇರಿದಂತೆ ಗ್ರಾಮಸ್ಥರು ಅಮರ್‌ ಹೈ, ಅಮರ ಹೈ, ಸಂದೀಪ್ ಅಮರ ಹೈ ಎಂಬ ಘೋಷಣೆ ಮೊಳಗಿಸಿದರು. 




ಮೆರವಣಿಗೆ ನಂತರ ವಿನಾಯಕ ವೃತ್ತದಲ್ಲಿ ಸಂದೀಪ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು ರಿಪ್ಪನ್‌ಪೇಟೆಯ ಜನರು ತಂಡೋಪತಂಡವಾಗಿ ಆಗಮಿಸಿ ಯೋಧನ ಅಂತಿಮ ದರ್ಶನ ಪಡೆದರು.ಇಂದು ಪಟ್ಟಣದ ಅಂಗಡಿ ಮುಂಗಟ್ಟುಗಳು ಸ್ವಯಂ ಘೋಷಿತ ಬಂದ್ ಆಗಿದ್ದವು.

ಮೃತ ಯೋಧನ ಸ್ನೇಹಿತರು ಕಣ್ಣಂಚಿನಲ್ಲಿಯೇ ಕಣ್ಣಿರು ಸುರಿಸುತ್ತಾ ಯೋಧನ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಸಾಗುತಿದ್ದರು.




 

Leave a Reply

Your email address will not be published. Required fields are marked *