Headlines

ಪೊಲೀಸರ ಭರ್ಜರಿ ಭೇಟೆ – ದಾಖಲೆ ಇಲ್ಲದ 5.8 ಕೋಟಿ‌ ಮೌಲ್ಯದ 9.5 KG ಚಿನ್ನ ವಶ

ಶಿವಮೊಗ್ಗ ಪೊಲೀಸರು  ಭರ್ಜರಿ ಬೇಟೆ ಮಾಡಿದ್ದಾರೆ. ಗಾಂಧಿಬಜಾರ್​ನಲ್ಲಿ ಸಂಗ್ರಹಿಸಿಟ್ಟಿದ್ದ ದಾಖಲೆ ಇಲ್ಲದ ಚಿನ್ನವನ್ನು ಜಪ್ತಿ ಮಾಡಿದ್ದಾರೆ. 




ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ವಿಚಾರದಲ್ಲಿ ಕೋಟೆ ಪೊಲೀಸ್ ಸ್ಟೇಷನ್​ ಸಿಬ್ಬಂದಿ ದಾಳಿ ನಡೆಸಿದ್ದು, ದಾಳಿ ವೇಳೆ ಬರೋಬ್ಬರಿ 9.5 ಕೆಜಿ ಚಿನ್ನ (gold) ಪತ್ತೆಯಾಗಿದೆ. 

ಇಲ್ಲಿನ ಎಲೆ ರೇವಣ್ಣನ ಕೇರಿಯಲ್ಲಿರುವ ಇರುವ ಅಂಗಡಿಯೊಂದರಲ್ಲಿ  ಇಷ್ಟುದೊಡ್ಡ ಮೊತ್ತದ ಚಿನ್ನ ಸೀಜ್ ಮಾಡಲಾಗಿದೆ. ಇದು ಲಕ್ಷ್ಮಣ್​ರವರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ದಾಖಲೆಗಳಿಲ್ಲದ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ಧಾರೆ. 

ಇವತ್ತು ಬೆಳಗ್ಗೆ ಕೋಟೆ ಪೊಲೀಸ್ ಸ್ಟೇಷನ್​ ಸಿಪಿಐ ಶಿವಪ್ರಸಾದ್​ರಿಗೆ  ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಬಂಗಾರದ ಆಭರಣಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಬಂದಿದೆ. 




ಈ ಮಾಹಿತಿಯನ್ನ ಆಧರಿಸಿ, ಅನುಮಾನಸ್ಪದ ವ್ಯಕ್ತಿಯನ್ನ ವಿಚಾರಿಸಿದ್ದಾರೆ. ಆತನ ಬಳಿ ಬಂಗಾರದ ಆಭರಣಗಳು ಪತ್ತೆಯಾಗಿದೆ. ಇನ್ನಷ್ಟು ವಿಚಾರಣೆ ನಡೆಸಿ ಆತನ ಅಂಗಡಿಯಲ್ಲಿ  ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಒಟ್ಟು ಅಂದಾಜು ಮೌಲ್ಯ 5,83,00,000/- ರೂ ಗಳ 9 ಕೆ. ಜಿ 565 ಗ್ರಾಂ ತೂಕದ ಬಂಗಾರದ ಆಭರಣಗಳು ದೊರಕಿದೆ. 

ಈ ಆಭರಣಗಳಿಗೆ ಸಂಬಂಧಿಸಿದ ದಾಖಲಾತಿ ಇಲ್ಲದ ಹಿನ್ನೆಯಲ್ಲಿ ಆಭರಣಗಳನ್ನು ಜಪ್ತಿ ಮಾಡಲಾಗಿದ್ದು,  ಮುಂದಿನ ಕ್ರಮಕ್ಕಾಗಿ ವಾಣಿಜ್ಯ ತೆರಿಗೆ ಇಲಾಖೆಗೆ ಕೋಟೆ ಪೊಲೀಸರು ಹಸ್ತಾಂತರಿಸಿದ್ದಾರೆ.



Leave a Reply

Your email address will not be published. Required fields are marked *