ಅಧಿಕಾರಿಗಳ ನಿರ್ಲಕ್ಷ್ಯ – ನಾಡಕಛೇರಿ ಮುಂಭಾಗದಲ್ಲಿ ರಾರಾಜಿಸುತ್ತಿದೆ 2018 ರ ಚುನಾವಣೆಯ ಬ್ಯಾನರ್
ರಿಪ್ಪನ್‌ಪೇಟೆ;- ಐದು ವರ್ಷಕ್ಕೊಮ್ಮೆ ನಡೆಯುವ ವಿಧಾನಸಭಾ ಚುನಾವಣೆ ಕಳೆದು ಪುನ: ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಇಲ್ಲಿನ ನಾಡಕಛೇರಿ ಮತ್ತು ಗ್ರಾಮ ಪಂಚಾಯ್ತಿ ಕಛೇರಿ ಮುಂಭಾಗ ಇನ್ನೂ ಚುನಾವಣಾ ಅಯೋಗದವರು 2018 ರ ವಿಧಾನಸಭಾ ಚುನಾವಣೆ ಬ್ಯಾನರ್ ತಗೆಯದೇ ನಿರ್ಲಕ್ಷö್ಯ ವಹಿಸಿದ್ದಾರೆಂಬುದಕ್ಕೆ ಇಲ್ಲಿ ರಾರಾಜಿಸುತ್ತಿರುವ ಹಳೆಯ ಬ್ಯಾನರ್‌ಗಳೇ ಸಾಕ್ಷಿಕರಿಸುತ್ತಿವೆ.
ಈಗಾಗಲೇ 2023 ರ ವಿಧಾನಸಭಾ ಚುನಾವಣೆ ಪ್ರಕಟಗೊಂಡು ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದರೂ ಕೂಡಾ ನಾಡಕಛೇರಿ ಮತ್ತು ಗ್ರಾಮ ಪಂಚಾಯ್ತಿ ಬಳಿಯಲ್ಲಿ ಆಳವಡಿಸಲಾಗಿರುವ 2018 ನೇ ವರ್ಷದ ಚುನಾವಣಾ ಅಯೋಗದ ವಿಧಾನಸಭಾ ಚುನಾವಣಾ ಪ್ಲೆಕ್ಸ್ ತೆರವುಗೊಳಿಸದೇ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದಕ್ಕೆ ಸಾರ್ವಜನಿಕರಲ್ಲಿ ಸುದ್ದಿಗೆ ಗ್ರಾಸವಾಗಿದೆ.
ಸಾರ್ವಜನಿಕರು ಕ್ಷಣ ಕಾಲ ನಾಡಕಛೇರಿಯ ಮತ್ತು ಗ್ರಾಮ ಪಂಚಾಯ್ತಿ ಬಳಿಯಲ್ಲಿನ 2018 ರ ವಿಧಾನಸಭಾ ಚುನಾವಣೆ
ಬ್ಯಾನರ್ ನೋಡಿ ನಾವುಗಳು 2018 ರ ವಿಧಾನಸಭಾ ಚುನಾವಣೆಯಲ್ಲಿ ಇದ್ದೇವೆ ಎನ್ನುವಂತೆ ಭಾಸವಾಗುತ್ತದೆ.ಅದಲ್ಲದೇ ಬ್ಯಾನರ್ ನ ಮೇಲ್ಬಾಗದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರ ಪೋಟೋ ಎದ್ದು ಕಾಣುತಿದ್ದು ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಇನ್ನಾದರೂ ಎಚ್ಚೆತ್ತು 2018 ರ ಬ್ಯಾನರ್ ತೆರವುಗೊಳಿಸಲು ಮುಂದಾಗುವರೇ ಕಾದು ನೋಡಬೇಕಾಗಿದೆ.