ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ತಮಡಿಕೊಪ್ಪ ಗ್ರಾಮದಲ್ಲಿ ಶ್ರೀ ಗುರು ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗದೇವತೆ ನಾಗಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಗೆಲುವಿಗಾಗಿ ಅವರ ಪರವಾಗಿ ಶ್ರೀ ಕ್ಷೇತ್ರದ ಧರ್ಮದರ್ಶಿಗಳು ಹಾಗೂ ಭಕ್ತರು ಹಾಗೂ ಗೃಹ ಸಚಿವರ ಆಪ್ತ ಸಹಾಯಕರಿಂದ ಹಾಗೂ ಹಾಲಪ್ಪ ಅಭಿಮಾನಿಗಳಿಂದ ಭಾನುವಾರ ಶ್ರೀ ಕ್ಷೇತ್ರದಲ್ಲಿ ವಿಶೇಷ ಆಶ್ಲೇಷ ಬಲಿ ಪೂಜೆ ವಿದ್ಯಾಪನ ಹೋಮ ಲಕ್ಷ್ಮಿ ಹೃದಯ ಹೋಮವು ಸಂಪನ್ನಗೊಂಡಿತು.
ವೇದ ಬ್ರಹ್ಮ ಮಂದಾರ್ತಿ ವೆಂಕಟೇಶಮಯ್ಯ ಮಂದಾರ್ತಿ ರವರ ನೇತೃತ್ವದಲ್ಲಿ ಪುರೋಹಿತ ವರ್ಗ ವೇದ ಘೋಷ ಮಂತ್ರ ಹೋಮ ಹವನಗಳನ್ನು ನೆರವೇರಿಸುವುದರ ಮೂಲಕ ವಿಶೇಷ ಪೂಜೆ ಕೈoಕರ್ಯ ಗಳನ್ನು ನೆರವೇರಿಸಿಕೊಟ್ಟರು.
ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಹರತಾಳು ಹಾಲಪ್ಪನವರ ಶ್ರೇಯೋಭಿವೃದ್ಧಿಗೆ ಹಾಗೂ ಅವರ ಸಜ್ಜನಿಕೆ ರಾಜಕಾರಣಕ್ಕೆ ಒಳ್ಳೆಯದನ್ನು ಬಯಸಿ ಶ್ರೀ ಕ್ಷೇತ್ರದ ಭಕ್ತಾದಿಗಳು ಹಾಗೂ ಕ್ಷೇತ್ರದ ಧರ್ಮದರ್ಶಿ ಪ್ರಕಾಶ್ ರವರು ಹಾಗೂ ಗೃಹ ಸಚಿವರ ಆಪ್ತ ಸಹಾಯಕರಿಂದ ಹಾಗೂ ಶಾಸಕ ಹಾಲಪ್ಪ ಪುತ್ರ ಚೇತನ್ ಹಾಲಪ್ಪ ರವರಿಂದ ಈ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ಒಂಬತ್ತು ಗಂಟೆಯಿಂದ ಆರಂಭವಾದ ಪೂಜಾ ಕಾರ್ಯಕ್ರಮ ಮಧ್ಯಾಹ್ನದ ತನಕ ನೆರವೇರಿತು ದೇವಸ್ಥಾನದಲ್ಲಿ ಮಧ್ಯಾನದ ಅನ್ನದಾಸೋಹ ಕಾರ್ಯಕ್ರಮ ನೆರವೇರಿತು.
ನೂರಾರು ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ದರ್ಶನ ಹಾಗೂ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿ ಪ್ರಕಾಶ್ ಗೃಹ ಸಚಿವರ ಆಪ್ತ ಸಹಾಯಕ ಅರುಣ್, ಮೋಹನ್ ಸುರೇಶ್ ಹೊನ್ನಾಳಿ ನಾಗರತ್ನ ದೇವರಾಜ್,ಪದ್ಮಾ ಸುರೇಶ್, ಸುಮಾ, ಪವಿತ್ರ ,ಅಕ್ಷತಾ ಇನ್ನು ಮುಂತಾದವರು ಇದ್ದರು.