Headlines

ರಿಪ್ಪನ್‌ಪೇಟೆ – ಕಾರು ಮತ್ತು ಬಸ್ ನಡುವೆ‌ ಮುಖಾಮುಖಿ ಡಿಕ್ಕಿ|accident

ರಿಪ್ಪನ್‌ಪೇಟೆ – ಕಾರು ಮತ್ತು ಬಸ್ ನಡುವೆ‌ ಮುಖಾಮುಖಿ ಡಿಕ್ಕಿ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಿರೇಜೇನಿ ಗ್ರಾಮದಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ‌ರುವ ಘಟನೆ ನಡೆದಿದೆ.




ಹೊಸನಗರದಿಂದ ರಿಪ್ಪನ್‌ಪೇಟೆಗೆ ತೆರಳುತಿದ್ದ ಭಾಗ್ಯಲಕ್ಷ್ಮಿ ಬಸ್ ಹಾಗೂ ರಿಪ್ಪನ್‌ಪೇಟೆಯಿಂದ ಹೊಸನಗರ ಕಡೆಗೆ ತೆರಳುತಿದ್ದ ಮಾರುತಿ ಆಲ್ಟೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ ನ ಬಲ ಭಾಗಕ್ಕೆ ಕಾರು ಡಿಕ್ಕಿಯಾಗಿದೆ ಎನ್ನಲಾಗುತ್ತಿದೆ.




ಅಪಘಾತದಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ ಎನ್ನಲಾಗುತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



About The Author

Leave a Reply

Your email address will not be published. Required fields are marked *